Wednesday, January 22, 2025

Worldcup 2023: ಇಂದು ಭಾರತ-ಶ್ರೀಲಂಕ ಸೆಣಸಾಟ

ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ಭಾರತ ಮತ್ತು ಶ್ರೀಲಂಕಾ ನಡುವೆ ಸೆಣೆಸಾಟ ನಡೆಯಲಿದ್ದು ಟಾಸ್​ ಗೆದ್ದ ಶ್ರೀಲಂಕಾ ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿದೆ.

ವಿಶ್ವಕಪ್​ ನ 33ನೇ ಪಂದ್ಯಕ್ಕೆ ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣ ಸಾಕ್ಷಿಯಾಗಲಿದ್ದು ಈ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಭಾರತದ ನಡುವೆ ನಡೆಯಲಿದೆ. ಒಂದೆಡೆ ವಿಶ್ವಕಪ್​ ಕ್ರಿಕೆಟ್​ ನಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಭಾರತ ಗೆದ್ದು ಬೀಗಿದ್ದರೇ ಮತ್ತೊಂದು ಕಡೆ ಶ್ರೀಲಂಕಾ ಗೆ ಈ ಪಂದ್ಯದಲ್ಲಿ ಗೆಲುವು ಸಾಧಿಸುವುದು ಮಹತ್ವದ್ದಾಗಿದೆ.

ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಭಾರತದ ತಂಡ:

ರೋಹಿತ್​ ಶರ್ಮ, ಶುಬ್ಮನ್​ ಗಿಲ್​, ವಿರಾಟ್​ ಕೋಹ್ಲಿ, ಶ್ರೇಯಸ್​ ಐಯರ್​, ಕೆ.ಎಸ್​ ರಾಹುಲ್​, ಸೂರ್ಯಕುಮಾರ್​ ಯಾದವ್​, ರವೀಂದ್ರ ಜಡೇಜ, ಮೊಹಮ್ಮದ್​ ಶಮಿ, ಜಸ್ಪ್ರೀತ್​ ಬೂಮ್ರ, ಕುಲ್ದೀಪ್​ ಯಾದವ್​, ಮೊಹಮ್ಮದ್​ ಸಿರಾಜ್​,  ಮೈದಾನಕ್ಕಿಳಿಯಲಿದ್ದು, ಇದರಲ್ಲಿ ರವಿಚಂದ್ರನ್​ ಅಶ್ವಿನ್​, ಶಾರ್ದುಲ್ ಟಾಕೂರ್​, ಇಶಾನ್​ ಕಿಷನ್​ ಬೆಂಚ್​ ಕಾಯಲಿದ್ದಾರೆ.

ಲಂಕಾ ತಂಡದಲ್ಲಿ ಆಡಲಿರುವ ಆಟಗಾರರು:

ಪತುಮ್​ ನಿಸಂಕರ್​, ದಿಮುತ್​ ಕರುಣರತ್ನೆ, ಕುಸಾಲ್​ ಮೆಂಡಿಸ್​, ಸದೀರ ಸಮರವಿಕ್ರಮ, ಚರೀತ್​ ಅಸಲಂಕಾ, ಆಂಜಲೋ ಮ್ಯಾಥೀವ್ಸ್​, ದುಶಾಂತ್​ ಹೆಮಂತ್​, ಮಹೀಶ ತೀಕ್ಷಣ, ಕಸೂನ್​ ರಜಿತಾ, ದುಶ್ಮಂತ ಚಮೀರ, ದಿಲ್ಶಾನ್​ ಮಧುಶಂಕ ಮೈದಾನಕ್ಕಿಳಿಯಲಿದ್ದಾರೆ.

RELATED ARTICLES

Related Articles

TRENDING ARTICLES