ಬೆಂಗಳೂರು : ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ ಸುಲ್ತಾನ, ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಇದು ಪಕ್ಕಾ ಸೆಲೆಬ್ರೇಷನ್ ಟೈಮ್.
ತಾರಕ್ ಚಿತ್ರದ ನಿರ್ದೇಶಕ ಪ್ರಕಾಶ್ ನಿರ್ದೇಶನದ ಹಾಗೂ ಡಿ ಬಾಸ್ ದರ್ಶನ್ ನಟಿಸುತ್ತಿರುವ ಹೊಸ ಸಿನಿಮಾ D-57 ಚಿತ್ರಕ್ಕೆ ಸದ್ದಿಲ್ಲದೇ ಇಂದು ಬೆಂಗಳೂರಿನ ದೊಡ್ಡ ಮಹಾ ಗಣಪತಿ ದೇವಸ್ಥಾನದಲ್ಲಿ ಮುಹೂರ್ತ ಮಾಡಲಾಗಿದೆ.
ಸದ್ಯಕ್ಕೆ D-57 ಎಂದು ಈ ಸಿನಿಮಾಗೆ ಹೆಸರಿಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ನಟ ದರ್ಶನ್ ಹಾಗೂ ಮಿಲನ ಪ್ರಕಾಶ್ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ ಬರಲಿದೆ ಎಂಬ ಸುದ್ದಿ ಹರಿದಾಡಿದ್ದು, ಇದೀಗ ನಿಜವಾಗಿದೆ. D-57 ಚಿತ್ರದ ಮುಹೂರ್ತದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ದಾಸನ ಫ್ಯಾನ್ಸ್ಗೆ ತ್ರಿಬಲ್ ಧಮಾಕ
ನಟ ದರ್ಶನ್ ಅವರು ಕಾಟೇರ ಚಿತ್ರದ ಅಂತಿಮ ಹಂತದ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ಈ ಮಧ್ಯೆ ಅತಿಥಿ ಪಾತ್ರದಲ್ಲಿ ನಟಿಸಿರುವ ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾ ಇದೇ ನವೆಂಬರ್ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಎರಡು ಸಿಹಿ ಸುದ್ದಿಯ ನಡುವೆಯೇ ಡಿ ಬಾಸ್ ತಮ್ಮ ಸೆಲೆಬ್ರೆಟಿಗಳಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ.
ಸದ್ದಿಲ್ಲದೆ ಸೆಟ್ಟೇರಿದ ನನ್ನ ಮತ್ತು ಡಿ ಬಾಸ್ ರವರ D-57 ಹೊಸ ಸಿನಿಮಾ..
ಜೈ ಮಾತಾ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ನನ್ನ ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ರವರ ಹೊಸ ಸಿನೆಮಾದ ಮುಹೂರ್ತ ಇಂದು ಬೆಂಗಳೂರಿನ ದೊಡ್ಡ ಮಹಾ ಗಣಪತಿ ದೇವಸ್ಥಾನದಲ್ಲಿ ನೆಡೆಯಿತು🙏.@dasadarshan #BoxOfficeSultan #D57 #DBoss #Kateera pic.twitter.com/RFPhKkXUXH
— Milana Prakash (@Milana_Prakash) November 2, 2023