Friday, December 27, 2024

ಪರೀಕ್ಷೆಯಲ್ಲಿ ಕಾಪಿ : 5ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

ಹಾಸನ : ಕಾಪಿ ಮಾಡಿದ ಆರೋಪಕ್ಕೆ ಕ್ಷಮಾಪಣೆ ಪತ್ರ ಬರೆದುಕೊಡು ಎಂದು ಹೇಳಿದ್ದಕ್ಕೆ ಇಂಜಿನಿಯರಿಂಗ್​​​ ವಿಧ್ಯಾರ್ಥಿನಿಯೊಬ್ಬಳು ಮನನೊಂದು ಕಾಲೇಜಿನ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ಹೊರವಲಯದ ರಾಜೀವ್​​ ಇನ್​​​​​ಸ್ಟಿಟ್ಯೂಟ್​​​​​​ ಆಫ್​ ಟೆಕ್ನಾಲಜಿ ಕಾಲೇಜಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಚನ್ನರಾಯಪಟ್ಟಣ ತಾಲೂಕಿನ ಹೊನ್ನಶೆಟ್ಟಿಹಳ್ಳಿ ಗ್ರಾಮದ ಮಾನ್ಯ(19) ಮೃತಪಟ್ಟಿರುವ ದುರ್ದೈವಿ. ಈಕೆ ಮೊದಲನೇ ವರ್ಷದ ಎಲೆಕ್ಟ್ರಾನಿಕ್​​​​​​ ಅಂಡ್​​ ಕಮ್ಯೂನಿಕೆಷನ್​ ಓದುತ್ತಿದ್ದರು.

ಇಂದು ಮೊದಲ ವರ್ಷದ ಪರೀಕ್ಷೆ ಬರೆಯುತ್ತಿದ್ದ ಮಾನ್ಯ ಪರೀಕ್ಷೆ ಸಮಯದಲ್ಲಿ ಕಾಪಿ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕಾಲೇಜು ಪ್ರಾಂಶುಪಾಲರಿಗೆ ಅಪಾಲಜಿ ಬರೆದುಕೊಡುವಂತೆ ಉಪನ್ಯಾಸಕರು ತಿಳಿಸಿದ್ದರು. ಇದರಿಂದ ಮನನೊಂದ ವಿದ್ಯಾರ್ಥಿನಿ ಪ್ರಾಂಶುಪಾಲರ‌ ಕೊಠಡಿಗೆ ತೆರಳಿದ ಬಳಿಕ ಕಟ್ಟಡದ ಮೇಲಿಂದ‌ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

RELATED ARTICLES

Related Articles

TRENDING ARTICLES