ಬೆಂಗಳೂರು: ಟೊಮ್ಯಾಟೋ ಬಳಿಕ ಈರುಳ್ಳಿ ಬೆಲೆ ದಿನದಿಂದ ಏರಿಕೆ ಕಾಣುತ್ತಿದ್ದು ಪ್ರತಿ ಕೆಜಿ ಈರುಳ್ಳಿ ಬೆಲೆ 70 ರಿಂದ 80 ರೂಪಾಯಿಗೆ ತಲುಪಿದೆ. ಇದರೊಂದಿಗೆ ಗ್ರಾಹಕರ ಕಣ್ಣೀರಿಡುವ ಪರಿಸ್ಥರಿ ನಿರ್ಮಾಣವಾಗಿದೆ.
ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಪ್ರತಿ ಕೆ.ಜಿ ಗೆ 100 ರಿಂದ 190 ರೂ.ವರೆಗೂ ಮಾರಾಟವಾಗಿದೆ. ರಾಜ್ಯದಲ್ಲಿ ಮೊದಲು ಚಿತ್ರದುರ್ಗ, ಚಳ್ಳಕೆರೆ, ಚಿಕ್ಕಬಳ್ಳಾಪುರ ಸೇರಿ ದಕ್ಷಿಣದ ರಾಜ್ಯಗಳಿಂದ ಈರುಳ್ಳಿ ಮಾರುಕಟ್ಟೆಗೆ ಬರುತ್ತದೆ. ನವೆಂಬರ್ ಬಳಿಕ ಗದಗ, ವಿಜಯಪುರದಿಂದ ಪೂರೈಕೆಯಾಗುತ್ತದೆ. ಆದರೆ, ಈ ವರ್ಷ ಬಿತ್ತನೆ ಕಡಿಮೆಯಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರ ಲೂಟಿಕೋರರ ಸರ್ಕಾರ: ಬಿ.ಎಸ್ ಯಡ್ಯೂರಪ್ಪ!
ಬೆಂಗಳೂರಿನ ಯಶವಂತಪುರ ಎಪಿಎಂಸಿಗೆ ಮಾರುಕಟ್ಟಗೆ ಇಷ್ಟೊತ್ತಿಗಾಗಲೇ ಸುಮಾರು 1.20 ಲಕ್ಷ ಚೀಲ ಈರುಳ್ಳಿ ಬರಬೇಕಿತ್ತು. ಆದರೆ, ಶೇ. 35ರಷ್ಟು ಕಡಿಮೆ ಅಂದರೆ ನಿತ್ಯ ಸರಾಸರಿ 60 ಸಾವಿರದಿಂದ 70 ಸಾವಿರ ಚೀಲಗಳು ಮಾತ್ರ ಬರುತ್ತಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕೊರತೆಯಾಗುವ ಸಾಧ್ಯತೆಗಳಿವೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.