Wednesday, January 22, 2025

Bad Day : ಇತಿಹಾಸ ಸೃಷ್ಟಿಸಿದ್ದ ದಿನವೇ ರೋಹಿತ್ ಶರ್ಮಾ ಕ್ಲೀನ್ ಬೌಲ್ಡ್

ಬೆಂಗಳೂರು : ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ಮೊದಲ ಓವರ್​ನಲ್ಲೇ ದೊಡ್ಡ ಆಘಾತ ಅನುಭವಿಸಿತು.

ಮಧುಶಂಕ ಎಸೆದ ಮೊದಲ ಎಸೆತವನ್ನು ನಾಯಕ ರೋಹಿತ್ ಶರ್ಮಾ ಬೌಂಡರಿಗಟ್ಟಿದರು. ಬಳಿಕ ಎರಡನೇ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆಗುವ ಮೂಲಕ ಪೆವಿಲಿಯನ್​ನತ್ತ ಹೆಜ್ಜೆ ಹಾಕಿದರು. ರೋಹಿತ್​ ಔಟಾಗುತ್ತಿದ್ದಂತೆಯೇ ವಾಂಖಡೆ ಸ್ಟೇಡಿಯಂ ಒಂದು ಕ್ಷಣ ಸೈಲೆಂಟ್ ಆಯಿತು.

ಸದ್ಯ ರನ್ ಮೆಷಿನ್ ವಿರಾಟ್ ಕೊಹ್ಲಿ 6 ಬೌಂಡರಿಗಳೊಂದಿಗೆ 26* ರನ್ ಹಾಗೂ ಶುಭ್​ಮನ್ ಗಿಲ್ 21* ರನ್​ ಗಳಿಸಿದ್ದಾರೆ. 9.2 ಓವರ್​ಗಳಲ್ಲಿ 1 ವಿಕೆಟ್ ನಷ್ಟಕ್ಕೆ ಭಾರತ 59 ರನ್​ ಕಲೆಹಾಕಿದೆ.

ದ್ವಿಶತಕ ಸಿಡಿಸಿದ ದಿನ

ರೋಹಿತ್ ಶರ್ಮಾ ಮೊದಲ ದ್ವಿಶತಕ ಸಿಡಿಸಿ 10 ವರ್ಷಗಳಾಗಿವೆ. ನವೆಂಬರ್ 2, 2023ರಂದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ವಿಧ್ವಂಸಕ ಇನ್ನಿಂಗ್ಸ್ ಆಡಿದ್ದರು. 158 ಎಸೆತಗಳಲ್ಲಿ 12 ಬೌಂಡರಿ ಹಾಗೂ 16 ಸಿಕ್ಸರ್​ಗಳೊಂದಿಗೆ 209 ರನ್​ ಸಿಡಿಸಿದ್ದರು.

117 ಎಸೆತಗಳಲ್ಲಿ ಮೊದಲ 101 (ಶತಕ) ರನ್​ ಪೂರ್ಣಗೊಳಿಸಿದ್ದರು. ನಂತರ ಕೇವಲ 41 ಎಸೆತಗಳಲ್ಲಿ 108 ರನ್​ಗಳನ್ನು ಪೂರ್ಣಗೊಳಿಸಿ ಇತಿಹಾಸ ಸೃಷ್ಟಿಸಿದ್ದರು. ಒಟ್ಟಾರೆ ರೋಹಿತ್ ಶರ್ಮಾ ಈವರೆಗೆ 3 ದ್ವಿಶತಕ ಸಿಡಿಸಿದ್ದಾರೆ.

RELATED ARTICLES

Related Articles

TRENDING ARTICLES