Sunday, November 10, 2024

ಶಿವಮೊಗ್ಗದಲ್ಲಿದೆ ಜಗತ್ತಿನಲ್ಲಿ ಎಲ್ಲಿಯೂ ಇಲ್ಲದ ಈ ಕಣ್ಣು ತೆರೆವ ಬುದ್ಧ

ಶಿವಮೊಗ್ಗ : ಸಾಮಾನ್ಯವಾಗಿ ನಾವು, ನೀವೆಲ್ಲರೂ ಧ್ಯಾನಸಕ್ತ ಬುದ್ಧನನ್ನು ನೋಡಿಯೇ ಇರ್ತಿವಿ. ಕಣ್ಣು ಮುಚ್ಚಿ ಭೋದಿ ವೃಕ್ಷದ ಕೆಳಗೆ ಕೂತ ಬುದ್ಧ, ಕಣ್ಣು ಮುಚ್ಚಿಕೊಂಡು ಕೂತಿರುವುದು ಸಾಮಾನ್ಯವಾಗಿ ನೋಡಿಯೇ ಇರ್ತಿವಿ. ಆದ್ರೆ, ಜಗತ್ತಿನಲ್ಲೇ ಎಲ್ಲಿಯೂ ಇಲ್ಲದ ಬುದ್ಧನನ್ನು ನೀವು ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಮಾತ್ರ ನೋಡಲು ಸಾಧ್ಯ. ಅರೇ, ಜಗ್ಗತ್ತಿನಲ್ಲಿ ಎಲ್ಲಿಯೂ ಇಲ್ಲದ ಬುದ್ಧ ಶಿವಮೊಗ್ಗದಲ್ಲಿನಾ ಅಂತ ಆಶ್ಚರ್ಯ ಪಡಬೇಡಿ. ತಪ್ಪದೇ ಈ ಸ್ಟೋರಿ ಓದಿ.

ಮರಣವೇ ಅಂತಿಮ, ಜನ್ಮ ಪಡೆದವನು ಖಂಡಿತವಾಗಿಯೂ ಸಾಯುತ್ತಾನೆ ಮತ್ತು ಜೀವನದಲ್ಲಿ ಎಲ್ಲವೂ ಅಭೇದ್ಯವಾಗಿದೆ, ಶಾಶ್ವತವಾದ ಯಾವುದನ್ನೂ ಹೊಂದಲು ಹೋಗುವುದಿಲ್ಲ ಆದ್ದರಿಂದ ಇತರರನ್ನು ಸಂತೋಷಪಡಿಸುವ ಬದಲು ಮೋಕ್ಷದತ್ತ ಗಮನಹರಿಸಿ ಎಂದು ಸಾರಿದವರು ಗೌತಮ ಬುದ್ಧ. ಈತನು ನೋಡಲು ಕಣ್ಣು ಮುಚ್ಚಿ ಧ್ಯಾನಕ್ಕೆ ಕುಳಿತಂತೆಯೇ ಕಾಣುತ್ತದೆ. ಆದರೆ, ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ನಮ್ಮ ಒಳಗಣ್ಣನ್ನು ತೆರೆವ ಬುದ್ಧನನ್ನು ಕಣ್ತುಂಬಿಕೊಳ್ಳಬಹುದು.

ಇಂತಹ ಒಂದು ಗಮನ ಸೆಳೆಯುವ ಬುದ್ಧ ಇರೋದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿರಿವಂತೆ ಗ್ರಾಮದಲ್ಲಿ. ಜಗತ್ತಿನಲ್ಲಿಯೇ ಎಲ್ಲಿಯೂ ಇಲ್ಲದ ಕಣ್ಣು ತೆರವ ಬುದ್ಧ ಇಲ್ಲಿ ಸ್ಥಾಪಿಸಲಾಗಿದೆ. ಸಿರಿವಂತೆಯ ಚಿತ್ರಸಿರಿಯಲ್ಲಿ ಅಪರೂಪದಲ್ಲೇ ಅಪರೂಪದ ಬುದ್ಧನನ್ನು ಸ್ಥಾಪಿಸಲಾಗಿದೆ.

1 ನಿಮಿಷ ಕಣ್ಣು ತೆರೆಯುವ ಬುದ್ಧ

11 ಮುಕ್ಕಾಲು ಅಡಿ ಎತ್ತರದ, 1 ನಿಮಿಷಗಳ ಕಾಲ ಕಣ್ಣು ತೆರೆಯುವ ಬುದ್ಧನನ್ನು ಸ್ಥಾಪಿಸಲಾಗಿದೆ. ಸಿರಿವಂತೆಯ ಚಂದ್ರಶೇಖರ್ ಈ ಪ್ರತಿಮೆಯನ್ನು ಫೈಬರ್ ಬಳಸಿ, ಸುಮಾರು 4 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದು, ತಾಂತ್ರಿಕವಾಗಿ ಕಣ್ಣನ್ನು ತೆರೆಯುವಂತೆ ಮಾಡಿದ್ದಾರೆ.  ಈ ಮೂಲಕ, ನಮ್ಮ ಒಳಗಣ್ಣನ್ನು ತೆರೆದು ಜ್ಞಾನೋದಯ ಮಾಡಿಕೊಳ್ಳೋಣ ಎನ್ನುವ ಸಂದೇಶ ಸಾರುವಂತಿದೆ ಪ್ರತಿಮೆ.

ಬುದ್ಧನಂತೆ ಒಳಗಣ್ಣನ್ನು ತೆರೆಯೋಣ

ಅಂದಹಾಗೆ, ಹಲವಾರು ವಿಚಾರದಲ್ಲಿ ನಾವೆಲ್ಲರೂ ಕುರುಡರಾಗಿರುತ್ತೇವೆ. ಬುದ್ಧನಂತೆ ನಾವು ಕೂಡ ನಮ್ಮ ಒಳಗಣ್ಣನ್ನು ತೆರೆಯೋಣ ಎಂಬ ವಿಶೇಷ ಆಲೋಚನೆಯಿಂದ ಬುದ್ಧನನ್ನು ವೀಕ್ಷಿಸಲು ಬರುವವರಿಗೆ ತಿಳಿ ಹೇಳುವಂತೆ ಮಾಡಿದ್ದಾರೆ ಚಂದ್ರಶೇಖರ್. ಬುದ್ಧ ರಾಜನಾದರೂ ಜಗತ್ತು ಸಂಚಾರದ ಬಳಿಕ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವಾಗಿತ್ತು ಎಂದು ಹೇಳಲಾಗುತ್ತದೆ. ಈ ಬುದ್ಧನನ್ನು ನೋಡಿಯಾದರೂ ನಮಗೆಲ್ಲರಿಗೂ ಜ್ಞಾನೋದಯವಾಗಲಿ ಎಂಬ ಸಂದೇಶ ರವಾನೆಯಾಗುತ್ತಿದೆ.  ನಾವು ಅಂಗಾಗ ದಾನ ಮಾಡುವುದರ ಮೂಲಕ ಮತ್ತೊಬ್ಬರಿಗೆ ಸಹಕಾರಿಯಾಗೋಣ ಎಂಬ ಸಂದೇಶ ಸಾರುತ್ತಿದೆ ಈ ಕಣ್ಣು ತೆರೆವ ಬುದ್ಧ.

  • ಗೋ.ವ. ಮೋಹನಕೃಷ್ಣ, ಶಿವಮೊಗ್ಗ

RELATED ARTICLES

Related Articles

TRENDING ARTICLES