Wednesday, January 22, 2025

ಇಡಿ ಸಮನ್ಸ್ : ವಿಚಾರಣೆಗೆ ಬರುವುದಿಲ್ಲ ಎಂದ ಕೇಜ್ರಿವಾಲ್

ನವದೆಹಲಿ : ಇಡಿ ವಿಚಾರಣೆಗೆ ಹಾಜರಾಗುವುದಿಲ್ಲ, ನಿಮ್ಮ ನೋಟಿಸ್​​ ಅನ್ನು ವಾಪಸ್ಸು ಪಡೆದುಕೊಳ್ಳಿ, ಇದು ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್​​​ ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ಅಕ್ಟೋಬರ್ 31ರಂದು ಇಡಿ ಸಮನ್ಸ್​​​ ನೀಡಿತ್ತು. ಆದರೆ, ಇದಕ್ಕೆ  ಅರವಿಂದ್​​​ ಕೇಜ್ರಿವಾಲ್ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಇಂದು ಇಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು.

ಇನ್ನು, ಅರವಿಂದ್ ಕೇಜ್ರಿವಾಲ್ ಅವರು ಮಧ್ಯಪ್ರದೇಶ ಚುನಾವಣೆಗೆ ಆಮ್ ಆದ್ಮಿ ಪಕ್ಷದ ಪರವಾಗಿ ಪ್ರಚಾರಕ್ಕಾಗಿ ಹೋಗುತ್ತಿರುವಾಗ ಇಡಿ ವಿಚಾರಣೆಗೆ ಹಾಜರಾಗುವಂತೆ ಹೇಳಿದೆ. ಇಡಿಯ ಈ ನೋಟಿಸ್​​​​ ರಾಜಕೀಯವಾಗಿದ್ದು, ಇದು ಅಕ್ರಮ ಎಂದು ಹೇಳಿದ್ದಾರೆ. ಇಡಿ ಬಿಜೆಪಿ ಆದೇಶದ ಮೇರೆಗೆ ಈ ಕೆಲಸವನ್ನು ಮಾಡುತ್ತಿದೆ. ಇನ್ನು ಇದನ್ನು ನಾನು ಒಪ್ಪುವುದಿಲ್ಲ, ತಕ್ಷಣ ತನ್ನ ಮೇಲೆ ಜಾರಿ ಮಾಡಿದ ನೋಟಿಸ್​​​ ವಾಪಸ್ಸು ಪಡೆಯುವಂತೆ ಇಡಿಗೆ ಪತ್ರದ ಮೂಲಕ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES