ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಕೃಷ್ಣಾಪುರದಲ್ಲಿ ಪ್ರಶಾಂತ್ ನಾಯ್ಕ ಎಂಬುವವರ ಮನೆಯ ಸಮೀಪ ಬೃಹತ್ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡಿದೆ.
ಕೂಡಲೇ ಸ್ಥಳೀಯ ಉರಗ ತಜ್ಞ ಮಹೇಶ್ ನಾಯ್ಕ ಎಂಬುವವರನ್ನು ಕರೆಸಿ ರಕ್ಷಣೆ ಮಾಡಿದ್ದಾರೆ. ಈ ಕಾಳಿಂಗ ಸರ್ಪವು ಬರೋಬ್ಬರಿ 13 ಅಡಿ ಉದ್ದವಾಗಿದೆ. ಇನ್ನು ಇದನ್ನು ರಕ್ಷಿಸಿ ಅರಣ್ಯಕ್ಕೆ ತೆಗೆದುಕೊಂಡು ಬಿಡಲಾಗಿದೆ.
ಇತ್ತೀಚೆಗಷ್ಟೇ ಜಿಲ್ಲೆಯ ಕಾರವಾರದ ಮನೆಯೊಂದರಲ್ಲಿ ಅಪರೂಪದ ತೋಳ ಹಾವು ಪತ್ತೆಯಾಗಿತ್ತು. ಕೂಡಲೇ ಗಾಬರಿಗೊಂಡ ಮನೆಯವರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಈ ವೇಳೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಎಚ್ಚರಿಕೆಯಿಂದ ಹಾವನ್ನು ಡಬ್ಬವೊಂದರಲ್ಲಿ ಸೆರೆ ಹಿಡಿದು ರಕ್ಷಿಸಿದ್ದಾರೆ.