ತುಮಕೂರು : 17 ಸಾವಿರ ಕೋಟಿ ಬರ ಪರಿಹಾರಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಕೇಂದ್ರ ಸರ್ಕಾರದಿಂದ ಇನ್ನು ಯಾವುದೇ ನೆರವು ಬಂದಿಲ್ಲ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ರಾಜ್ಯದಲ್ಲಿ ಬರ ನಿರ್ವಹಣೆ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಮಾತನಾಡಿರುವ ಅವರು, ಬರ ಪರಿಹಾರ ನೀರಿಕ್ಷೆಯಲ್ಲಿದ್ದೇವೆ, ಕೇಂದ್ರ ಸರ್ಕಾರ ಎಷ್ಟು ಕೊಡುತ್ತದೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ 226 ತಾಲ್ಲೂಕುಗಳಲ್ಲಿ 200 ಹೆಚ್ಚು ತಾಲೂಕುಗಳನ್ನ ಬರಪೀಡಿತ ಪ್ರದೇಶ ಅಂತ ಘೋಷಣೆ ಮಾಡಲಾಗಿದೆ. ತುಮಕೂರು ಜಿಲ್ಲೆಯಲ್ಲಿ 10 ತಾಲೂಕಿನಲ್ಲಿ 1 ತಾಲ್ಲೂಕನ್ನ ಮಾತ್ರ ಪರಿಗಣಿಸಿರಲಿಲ್ಲ. ಈಗ 10 ತಾಲ್ಲೂಕುಗಳನ್ನ ಬರಪೀಡಿತ ಪ್ರದೇಶ ಅಂತ ಘೋಷಣೆ ಮಾಡಲಾಗಿದೆ. ನಮಗೆ ಹಣಕಾಸಿನ ಕೊರತೆಯಂತು ಸದ್ಯಕ್ಕೆ ಇಲ್ಲ ಎಂದು ಹೇಳಿದ್ದಾರೆ.
DCಗಳ ಖಾತೆಯಲ್ಲಿ 550 ಕೋಟಿ
ಈಗಾಗಲೇ 19 ಕೋಟಿ ಹಣವನ್ನ ಜಿಲ್ಲಾಧಿಕಾರಿ ಅಕೌಂಟ್ಗೆ ಹಾಕಲಾಗಿದೆ. ಆ ಹಣವನ್ನ ಯಾವುದಕ್ಕೆ ಬಳಸಬೇಕು ಎಂಬ ಸೂಚನೆಯನ್ನ ಕೊಡಲಾಗಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಗುಳೆ ಹೋಗುವಂತಹವರಿಗೆ ಕೆಲಸ ಒದಗಿಸುವ ಕಾರ್ಯಕ್ಕೆ ಹಣ ಮೀಸಲಿಡಲಾಗಿದೆ. ಸುಮಾರು 550 ಕೋಟಿ ಹಣ ಎಲ್ಲಾ ಜಿಲ್ಲಾಧಿಕಾರಿಗಳ ಬ್ಯಾಂಕ್ ಖಾತೆಯಲ್ಲಿದೆ ಎಂದು ಡಾ.ಜಿ ಪರಮೇಶ್ವರ್ ಮಾಹಿತಿ ನೀಡಿದ್ದಾರೆ.