Sunday, November 3, 2024

ಡಿ ಕಾಕ್-ಡಸ್ಸೆನ್ ಶತಕ : ಕಿವೀಸ್​ಗೆ 358 ರನ್​ಗಳ ಬೃಹತ್ ಗುರಿ ನೀಡಿದ ಹರಿಣಗಳು

ಬೆಂಗಳೂರು : ವಿಶ್ವಕಪ್-2023 ಟೂರ್ನಿಯ 32ನೇ ಪಂದ್ಯದಲ್ಲಿ ಕಿವೀಸ್​ ಬೌಲರ್​ಗಳನ್ನು ಹರಿಣಗಳು ಹಿಗ್ಗಾಮುಗ್ಗ ದಂಡಿಸಿದರು. ನಿಗದಿತ 50 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 357 ರನ್​ ಕಲೆಹಾಕಿದೆ. ಈ ಮೂಲಕ ಕಿವೀಸ್​ಗೆ 358 ರನ್​ಗಳ ಬೃಹತ್ ಟಾರ್ಗೆಟ್ ನೀಡಿದೆ.

ಪುಣೆಯಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಲ್ಯಾಥಮ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ದಕ್ಷಿಣ ಆಫ್ರಿಕಾ ಬ್ಯಾಟರ್​ಗಳು ಕಿವೀಸ್ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದರು.

ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾಕಕ್ಕೆ ಆರಂಭಿಕ ಆಟಗಾರರಾದ ಕ್ವಿಂಟನ್ ಡಿ ಕಾಕ್ ಹಾಗೂ ನಾಯಕ ಬವುಮಾ ಉತ್ತಮ ಆರಂಭ ನೀಡಿದರು. ಬವುಮಾ 24 ರನ್​ ಗಳಿಸಿ ಪೆವಿಲಿಯನ್​ನತ್ತ ಮುಖ ಮಾಡಿದರು. ಬಳಿಕ ಡಿ ಕಾಕ್ ಜೊತೆ ಸೇರಿಕೊಂಡ ಡಸ್ಸೆನ್ ಕಿವೀಸ್ ಬೌಲರ್​ಗಳನ್ನು ಚೆಂಡಾಡಿದರು.

116 ಎಸೆತಗಳನ್ನು ಎದುರಿಸಿದ ಡಿ ಕಾಕ್ 3 ಭರ್ಜರಿ ಸಿಕ್ಸರ್ ಹಾಗೂ 10 ಬೌಂಡರಿಗಳೊಂದಿಗೆ ಆಕರ್ಷಕ ಶತಕ(114) ಸಿಡಿಸಿದರು. ಈ ಮೂಲಕ ವಿಶ್ವಕಪ್​ನಲ್ಲಿ 4 ಶತಕ ಗಳಿಸಿದ 3ನೇ ಬ್ಯಾಟರ್ ಎಂಬ ಶ್ರೇಯಕ್ಕೆ ಪಾತ್ರರಾದರು. ಡಿ ಕಾಕ್ ನಿರ್ಗಮನದ ಬಳಿಕ ಅಬ್ಬರಿಸಿದ ಡಸ್ಸೆನ್ 118 ಎಸೆತಗಳಲ್ಲಿ 5 ಬೊಂಬಾಟ್ ಸಿಕ್ಸರ್ ಹಾಗೂ 9 ಬೌಂಡರಿಗಳ ನೆರವಿನೊಂದಿಗೆ ಭರ್ಜರಿ ಶತಕ (133) ಬಾರಿಸಿದರು.

ಮಿಲ್ಲರ್ ಬೊಂಬಾಟ್ ಅರ್ಧಶತಕ

ಬಳಿಕ ಡೇವಿಡ್ ಮಿಲ್ಲರ್ 30 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 2 ಬೌಂಡರಿ ನೆರನೊಂದಿಗೆ ಅರ್ಧಶತಕ (53) ಸಿಡಿಸಿ ತಂಡದ ಮೊತ್ತವನ್ನು 300ರ ಗಡಿ ದಾಡಿಸಿದರು. ಕ್ಲಾಸೆನ್ ಅಜೇಯ 15 ಹಾಗೂ ಮಾಕ್ರಮ್ ಅಜೇಯ 6 ರನ್​ ಗಳಿಸಿದರು. ನ್ಯೂಜಿಲೆಂಡ್ ಪರ ಟೀಮ್ ಸೌಥಿ 2, ಬೋಲ್ಟ್ ಹಾಗೂ ನೀಶಮ್ ತಲಾ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES