Monday, December 23, 2024

ಮೈಸೂರು : ಹೈಟೆಕ್ ವೇಶ್ಯವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ

ಮೈಸೂರು : ನಿವೃತ್ತ ಪೊಲೀಸ್ ಅಧಿಕಾರಿ, ಪೊಲೀಸ್ ಅಧಿಕಾರಿಯಾಗಿದ್ದವರ ಮನೆ ಇದು ಎನ್ನುವ ಭಯ ಇಲ್ಲದೇ ಅವರ ಕಟ್ಟಡ ಬಾಡಿಗೆ ಪಡೆದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಪ್ರಕರಣ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.

ಮೈಸೂರಿನ ಲಲಿತ‌ಮಹಲ್ ನಗರದ ಮುಖ್ಯ ರಸ್ತೆಯಲ್ಲಿರುವ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮನೆಯನ್ನು ಬಾಡಿಗೆ ಪಡೆದು ಫ್ಯಾಮಿಲಿ ಸಲೂನ್ ಹೆಸರಲ್ಲಿ ಮಹೇಶ್​ ಎಂಬಾತ ವೇಶ್ಯಾವಾಟಿಕೆ ನಡೆಸುತ್ತಿರುವುದು ಬಟಾಬಯಲಾಗಿದೆ. ಒಡನಾಡಿ, ಪೊಲೀಸ್ ಕಮಿಷನರ್ ವಿಶೇಷ ದಳ ಕಾರ್ಯಾಚರಣೆ ನಡೆಸಿ ವೇಶ್ಯಾವಾಟಿಕೆ ದಂಧೆಯನ್ನು ಪತ್ತೆ ಮಾಡಿದೆ.

ಮಹೇಶ್ ಎಂಬಾತ ಸಲೂನ್ ನಡೆಸುವುದಾಗಿ ಮೈಸೂರಿನ ಲಲಿತ‌ಮಹಲ್ ನಗರದ ಮುಖ್ಯ ರಸ್ತೆಯಲ್ಲಿರುವ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಕಟ್ಟಡವನ್ನು ಬಾಡಿಗೆ ಪಡೆದುಕೊಂಡಿದ್ದ. ಅದರಂತೆ ಹೊರಗಡೆ ನೋಡುವವರುಗೆ ಫ್ಯಾಮಿಲಿ ಸಲೂನ್ ಅಂತ ಬೋರ್ಡ್ ಹಾಕಿದ್ದ. ಆದ್ರೆ, ಒಳಗಡೆ ಮಾತ್ರ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ. ಇದನ್ನು ಒಡನಾಡಿ, ಪೊಲೀಸ್ ಕಮಿಷನರ್ ವಿಶೇಷ ದಳ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿದೆ. ಈ ಬಗ್ಗೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES