Wednesday, January 22, 2025

ಪಂಚ ರಾಜ್ಯಕ್ಕೆ ಹಣ ಸಾಗಿಸಲು ದೆಹಲಿಯಿಂದ ಬಂದಿದ್ದಾರೆ : ಎನ್. ರವಿಕುಮಾರ್

ಬೆಂಗಳೂರು : ದೆಹಲಿಯಿಂದ ಕಾಂಗ್ರೆಸ್ ನಾಯಕರು ಬಂದಿದ್ದಾರೆ. ಪಂಚ ರಾಜ್ಯಕ್ಕೆ ಹಣ ಸರಬರಾಜು ಮಾಡಿಸಲು ಬಂದಿದ್ದಾರೆ ಅಂತ ಜನ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್​ ಆರೋಪಿಸಿದ್ದಾರೆ.

ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ರೇಡ್​ನಿಂದ ಸಿಕ್ಕಿರುವ ಹಣ ಯಾರದ್ದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್​​, ರಾಜ್ಯ ಉಸ್ತುವಾರಿ ರಣದೀಪ್​ ಸಿಂಗ್​​​​ ಸುರ್ಜೇವಾಲ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಇವರು ಕನ್ನಡದ ಸಂಪತ್ತು, ನೆಲ-ಜಲ, ಭಾಷೆ ರಕ್ಷಣೆ ಮಾಡುವವರಲ್ಲ. ರಕ್ಷಣೆ ಮಾಡುವವರಾಗಿದ್ರೆ ಕಾವೇರಿ ನೀರನ್ನು ತಮಿಳುನಾಡಿಗೆ ಯಾಕೆ ಬಿಟ್ರು? ಸುಪ್ರೀಂ ಕೋರ್ಟ್​​ನಲ್ಲಿ ಇವರು ಸರಿಯಾದ ವಾದ ಮಂಡಿಸಿಲ್ಲ. ಇವರು ಯಾವಾಗಲೂ ತಮಿಳುನಾಡಿಗೆ ಸೋಲುತ್ತಿದ್ದಾರೆ ಎಂದು ರವಿಕುಮಾರ್ ಕಿಡಿಕಾರಿದ್ದಾರೆ.

ಮಹಾನ್ ನಾಯಕನ ಕೈವಾಡ ಇದೆ

ಶಾಸಕ ರಮೇಶ್ ಜಾರಕಿಹೊಳಿ ಮಾತು ಸತ್ಯವಾಗಿದೆ. ಇವರು ಇಬ್ಬರು ಬಂದಿರೋದು ಅತ್ಯಂತ ನಾಚಿಕೆಗೇಡಿನ ಸಂಗತಿ. ಇವರು ಕರ್ನಾಟಕದಲ್ಲಿ ಹಣ ಲೂಟಿ ಮಾಡಲು ಬಂದಿದ್ದಾರೆ. ಸಿಡಿ ಪ್ರಕರಣವನ್ನು ಸಿಬಿಐಗೆ ಕೊಡಬೇಕೆಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಇದರ ಹಿಂದೆ ಮಹಾನ್ ನಾಯಕನ ಕೈವಾಡ ಇದೆ ಎಂದು ಹೇಳಿದ್ದಾರೆ. ಅದಕ್ಕಾಗಿ ಪ್ರಕರಣವನ್ನು ಸಿಬಿಐ ನಿಂದ ತನಿಖೆ ಮಾಡಿಸಲಿ ಎಂದು ಒತ್ತಾಯಿಸಿದ್ದಾರೆ.

RELATED ARTICLES

Related Articles

TRENDING ARTICLES