Wednesday, December 18, 2024

ಸಿದ್ದರಾಮಯ್ಯನವರೇ ರಾಜ್ಯ ನಾಶ ಮಾಡೋದು ಬಿಟ್ಟು, ಜನರ ಏಳಿಗೆಗಾಗಿ ಶ್ರಮಿಸಿ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಕರ್ನಾಟಕವನ್ನು ನಾಶ ಮಾಡುವ ಪ್ರಯತ್ನ ಬಿಟ್ಟು ಬಿಡಿ. ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುವುದನ್ನು ಬಿಟ್ಟು, ನಿಮ್ಮ ನಿಮ್ಮಲ್ಲೇ ರಾಜಕೀಯ ಕಿತ್ತಾಟ ನಾಟಕವನ್ನು ಬಿಟ್ಟು, ರಾಜ್ಯದ ಪ್ರಗತಿಗಾಗಿ ರಾಜ್ಯದ ಜನರ ಏಳಿಗೆಗಾಗಿ ಯೋಚಿಸಿ ಶ್ರಮಿಸಿ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಎತ್ತ ಸಾಗುತ್ತಿದೆ ಸಮೃದ್ಧ ಕರ್ನಾಟಕ? ಉತ್ತರಿಸಿ ಸಿದ್ದರಾಮಯ್ಯನವರೇ.. ಇದು ಕೇವಲ ನಮ್ಮ ಆಗ್ರಹವಲ್ಲ, ಸ್ವಾಭಿಮಾನಿ ಕನ್ನಡಿಗರ ಆಗ್ರಹ ಎಂದು ಕುಟುಕಿದ್ದಾರೆ.

ಮಠ ಮಂದಿರಗಳ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ. ರಸ್ತೆ-ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ. ರೈತರಿಗೆ ಕೃಷಿಗೆ ಬೇಕಾದ ವಿದ್ಯುತ್ ಸಿಗುತ್ತಿಲ್ಲ. ಸರ್ಕಾರದ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ನೌಕರರಿಗೆ ತಿಂಗಳ ಸಂಬಳ ಸಿಗುತ್ತಿಲ್ಲ. ಬಿಜೆಪಿ ಸರ್ಕಾರ ಅನುಮೋದನೆ ನೀಡಿದ ಎಲ್ಲಾ ಯೋಜನೆಗಳಿಗೂ ತಡೆಹಿಡಿಯಲಾಗಿದೆ ಎಂದು ಕಿಡಿಕಾರಿದ್ದಾರೆ.

ರೈತರ ಬೆಳೆ ನಾಶದ ಪರಿಹಾರಕ್ಕಿಲ್ಲ

ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಅನುದಾನವಿಲ್ಲ. ನೀರಾವರಿ ವ್ಯವಸ್ಥೆಗೆ ಯೋಜನೆಯಿಲ್ಲ. ಬಹುಸಂಖ್ಯಾತ ಹಿಂದೂಗಳ ಅಭಿವೃದ್ಧಿಗೆ ಯಾವುದೇ ಯೋಜನೆಯಿಲ್ಲ. ಸಚಿವರ ಹೊಸ‌ ಕಾರು ಖರೀದಿಗೆ ಇರುವ ಹಣ, ರೈತರ ಬೆಳೆ ನಾಶದ ಪರಿಹಾರಕ್ಕಿಲ್ಲ. ರಾಜ್ಯದುದ್ದಗಲದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES