Wednesday, January 22, 2025

5 ವರ್ಷ ಸಿದ್ದರಾಮಯ್ಯನವರೇ ಸಿಎಂ : ಸಚಿವ ಜಮೀರ್ ಅಹಮದ್

ದಾವಣಗೆರೆ : ಸಿಎಂ ಸೀಟ್ ಖಾಲಿ ಇಲ್ಲ, ಇನ್ನು 5 ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಪರ ಆಪ್ತ ಸಚಿವ ಬಿ.ಝಡ್ ಜಮೀರ್ ಅಹಮದ್ ಬ್ಯಾಟ್ ಬೀಸಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲ ಅಸಾಧ್ಯ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಗಲು ಕನಸು ಕಾಣುತ್ತಿದ್ದಾರೆ. 56 ಜನ MLAಗಳನ್ನು ಕರೆದುಕೊಂಡು ಹೋಗಿ ಅಪರೇಷನ್ ಮಾಡೋದು ಸಾಧ್ಯನಾ? ಎಂದು ತಿರುಗೇಟು ನೀಡಿದ್ದಾರೆ.

ರಮೇಶ್ ಜಾರಕಿಹೊಳಿ ಅವರನ್ನೇ ಕೇಳಿ ಆಪರೇಷನ್ ಎಷ್ಟು ಕಷ್ಟ ಅಂತ. ಸಮ್ಮಿಶ್ರ ಸರ್ಕಾರದಲ್ಲಿ 17 ಜನರನ್ನು ಕರೆದುಕೊಂಡು ಹೋಗಲು ಎಷ್ಟು ಸರ್ಕಸ್ ಮಾಡಿದ್ದಾರೆ. ರಮೇಶ್ ಹೈಕಮಾಂಡ್ ಬಳಿ ಬೇಳೆ‌ ಬೇಯಿಸಿಕೊಳ್ಳಲು ಹಿಂಗೆ ಮಾತಾಡ್ತಿದ್ದಾರೆ. ರಮೇಶ್ ಬಿಜೆಪಿಯಲ್ಲಿ ಇರೋ ಶಾಸಕರನ್ನು ಉಳಿಸಿಕೊಳ್ಳಲಿ. ಬಿಜೆಪಿ ಶಾಸಕರು ಕಾಂಗ್ರೆಸ್​​ಗೆ ಬರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಮೊದಲು ಅವರ‌ ಬಗ್ಗೆ ಗಮನ ಹರಿಸಲಿ ಎಂದು ಚಾಟಿ ಬೀಸಿದ್ದಾರೆ.

RELATED ARTICLES

Related Articles

TRENDING ARTICLES