Saturday, November 2, 2024

ಮಹಾರಾಷ್ಟ್ರದಲ್ಲಿ ಬಸ್​ಗೆ ಬೆಂಕಿ : ಅದು ತಪ್ಪು, ಏನು ಕ್ರಮ ಕೈಗೊಳ್ಳಬೇಕೋ ಅದನ್ನ ಮಾಡ್ತೇವೆ : ಡಿ.ಕೆ ಶಿವಕುಮಾರ್

ಬೆಂಗಳೂರು : ಮಹಾರಾಷ್ಟ್ರದಲ್ಲಿ ಬಸ್​ಗೆ ಬೆಂಕಿ ಹಚ್ಚಿರುವ ಪ್ರಕರಣ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಅದು ಬಹಳ ತಪ್ಪು, ಯಾರೇ ಆಗಲಿ ನಮ್ಮ ರಾಜ್ಯದ ಹಿತ ಕಾಪಾಡಬೇಕು ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ‌ ರಾಜ್ಯದ ಒಳಗಡೆ ರಕ್ಷಣೆ ಮಾಡಬೇಕು. ಅದು ತಪ್ಪು ಅದಕ್ಕೆ ಏನು ಕ್ರಮ ಕೈಗೊಳ್ಳಬೇಕೋ ಅದನ್ನ ಮಾಡ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿದ್ದಾರೆ. ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ನಾಯಕರ ತಂಡ ಬರ ಅಧ್ಯಯನ ಮಾಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬರ ಅಧ್ಯಯನ ಮಾಡಲಿ ತಪ್ಪೇನಿಲ್ಲ. ಆದರೆ, ಕೇಂದ್ರ ಸರ್ಕಾರದಿಂದ ದುಡ್ಡು ಕೊಡಿಸಲಿ. ದುಡ್ಡು ಏನು? ಎಷ್ಟು ಅಂತ ನಮ್ಮ ಕೃಷಿ ಸಚಿವರು ಹಾಗೂ ಕಂದಾಯ ಸಚಿವರು ವರದಿ ಕೊಟ್ಟಿದ್ದಾರೆ. ಅದರ ಪ್ರಕಾರ ದುಡ್ಡು ಕೊಡಿಸಲಿ ಎಂದು ಚಾಟಿ ಬೀಸಿದ್ದಾರೆ.

ದುಡ್ಡು ಕೊಡಿಸಿ ಎಂದು ಬಿಜೆಪಿಗೆ ಮನವಿ

ಕೇಂದ್ರ ಸರ್ಕಾರ ಸ್ವಲ್ಪ ಲಿಬರಲ್ ಆಗಿದೆ. 200ಕ್ಕೂ ಹೆಚ್ಚು ತಾಲೂಕುಗಳನ್ನ ಬರ ಎಂದು ಘೋಷಣೆ ಮಾಡಿದೆ. ಅವರದೇ ಆದಂತಹ ನಾಮ್ಸ್ ಇದೆ. ಅದರ ಪ್ರಕಾರವೇ ಅವರು ಮಾಡಿದ್ದಾರೆ. ಅದಕ್ಕೆ ಅವರು ಹಣ ಬಿಡುಗಡೆ ಮಾಡ್ತಾರೆ. ಅದಕ್ಕೆ ಇವ್ರು ಹೋಗಿ ನೋಡಿಲಿ, ಕೇಂದ್ರ ಸರ್ಕಾರಕ್ಕೆ ವರದಿ ಮಾಡಲಿ. ಇವ್ರು ಹೋಗಿ ದುಡ್ಡು ಕೊಡಿಸಲಿ ಅಂತ ಮನವಿ ಮಾಡ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES