Saturday, January 18, 2025

ನಟ ದರ್ಶನ್ ವಿರುದ್ಧ ಮಹಿಳೆಯಿಂದ ದೂರು ದಾಖಲು

ಬೆಂಗಳೂರು : ಹುಲಿ ಉಗುರು ಪೆಂಡೆಂಟ್ ಧರಿಸಿದ್ದ ನಟ ದರ್ಶನ್ ವಿರುದ್ಧ ಇತ್ತೀಚೆಗಷ್ಟೇ ದೂರು ದಾಖಲಾಗಿತ್ತು. ಆ ಪ್ರಕರಣ ಮಾಸುವ ಬೆನ್ನಲ್ಲೇ ಇದೀಗ ದರ್ಶನ್ ಅವರ ಮೇಲೆ ಮತ್ತೊಂದು ದೂರು ದಾಖಲಾಗಿದೆ.

ನಟ ದರ್ಶನ್ ವಿರುದ್ಧ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಅಮಿತಾ ಜಿಂದಾಲ್​ ಅವರೇ ದರ್ಶನ್ ಮೇಲೆ ದೂರು ದಾಖಲಿಸಿರುವ ನೊಂದ ಮಹಿಳೆ.

ಬೆಂಗಳೂರಿನ ಆರ್.ಆರ್​ ನಗರದ ಆಸ್ಪತ್ರೆ ಸಮಾರಂಭಕ್ಕೆ ಅಮಿತಾ ಜಿಂದಾಲ್ ಅವರು ಬಂದಿದ್ದರು. ಈ ವೇಳೆ ನಟ ದರ್ಶನ್ ಮನೆ ಪಕ್ಕ ತಮ್ಮ ಕಾರನ್ನು ಪಾರ್ಕಿಂಗ್ ಮಾಡಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಕಾರನ್ನು ತೆಗೆಯುವಾಗ 3 ನಾಯಿಗಳು ಇದ್ದವು. ಆಗ ದರ್ಶನ್ ಮನೆಯ ಹುಡುಗರಿಗೆ ಶ್ವಾನಗಳನ್ನು ಪಕ್ಕಕ್ಕೆ ಸರಿಸುವಂತೆ ಅಮಿತಾ ಹೇಳಿದ್ದಾರೆ.

ಈ ವೇಳೆ ಮಹಿಳೆ ಹಾಗೂ ಹುಡುಗರ ಮಧ್ಯೆ ಮಾತಿನ ಚಕಮಕಿಯಾಗಿದೆ. ಇದೇ ವೇಳೆ ದರ್ಶನ್ ಅವರ ಮನೆಯ ನಾಯಿ ಮಹಿಳೆ ಮೇಳೆ ದಾಳಿ ನಡೆಸಿ ಹೊಟ್ಟೆ ಭಾಗಕ್ಕೆ ಕಚ್ಚಿದೆ ಎನ್ನಲಾಗಿದೆ. ಹೀಗಾಗಿ, ಮಹಿಳೆ ನಟ ದರ್ಶನ್ ವಿರುದ್ಧ ಆರ್.ಆರ್ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

RELATED ARTICLES

Related Articles

TRENDING ARTICLES