Friday, December 27, 2024

ಡಿ.ಕೆ ಶಿವಕುಮಾರ್​​ ಅವರಿಂದಲೇ ಸರ್ಕಾರ ಬೀಳಲಿದೆ : ರಮೇಶ್ ಜಾರಕಿಹೊಳಿ

ಬೆಳಗಾವಿ : ಆರು ತಿಂಗಳು ಏನು ಮಾತನಾಡಲ್ಲ ಎಂದು ಸಂಕಲ್ಪ ಮಾಡಿದ್ದೆ. ನಮ್ಮ ಹೆಸರು ಕೆಡಸಿದ್ದರಿಂದ ನಾನು ಅನಿವಾರ್ಯವಾಗಿ ಮಾತನಾಡುತ್ತೇನೆ. ಹಿರಿಯ ಶಾಸಕನಾಗಿ ಸರ್ಕಾರದ ವಿರುದ್ಧ ಮಾತನಾಡಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಸಿಎಂ ಡಿ.ಕೆ ಶಿವಕುಮಾರ್ ನಾಟಕ ಮಂಡಳಿ ಬಿಜೆಪಿ ನಾಯಕರ ಹೆಸರು ಕೆಡಸುತ್ತಿದೆ. 50,100 ಕೋಟಿ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕುಟುಕಿದರು.

2019ರಲ್ಲಿ ಡಿಕೆಶಿ ಸೊಕ್ಕು, ದುರಾಡಳಿತದಿಂದ ಪಕ್ಷಾಂತರ ಮಾಡಿದ್ವಿ. ಆಪರೇಷನ್ ಕಮಲ ಎಲ್ಲವೂ ನಡೆಯುತ್ತಿಲ್ಲ ಎಲ್ಲವೂ ಸುಳ್ಳು. ಗ್ಯಾರಂಟಿ ಯೋಜನೆ ಫೇಲ್ ಆಗಿದೆ. ಜನರ ದಿಕ್ಕು ಬದಲು ಮಾಡಲು ಈ ರೀತಿಯಲ್ಲಿ ಮಾಡುತ್ತಿದ್ದಾರೆ. ಡಿ.ಕೆ ಶಿವಕುಮಾರ್ ಅಷ್ಟೇ ಯಾಕೆ ಆಪರೇಷನ್ ಕಮಲದ ಬಗ್ಗೆ ಮಾತನಾಡುತ್ತಿದ್ದಾರೆ. ಅನಿವಾರ್ಯವಾಗಿ ನಿನ್ನೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ ಎಂದು ತಿಳಿಸಿದರು.

ಸರ್ಕಾರ ಮುಂದುವರಿಯಬೇಕು

ಜೆಡಿಎಸ್, ಬಿಜೆಪಿ ಮೈತ್ರಿ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದೇನೆ. ಸರ್ಕಾರ ಬಿಳಬಾರದು, ಮುಂದುವರಿಯಬೇಕು. ಈ ಹಿಂದಿನ ಸಿದ್ದರಾಮಯ್ಯ ಈಗ ಇಲ್ಲ. ಸಮ್ಮಿಶ್ರ ಸರ್ಕಾರ ಸಂದರ್ಭದಲ್ಲಿ ಅಜ್ಮೀರ್ ಪ್ರವಾಸದಿಂದ ಇದು ಆರಂಭವಾಯಿತು. ಅಧಿಕಾರಕ್ಕೆ ಬಂದಾಗ ಬೇರೆ ಇರ್ತಾರೆ, ಇಲ್ಲದಾಗ ಡಿಕೆಶಿ ಇರ್ತಾರೆ ಎಂದು ಹೇಳಿದರು.

‌ಡಿಕೆಶಿಯಿಂದ ಸರ್ಕಾರ ಬೀಳಲಿದೆ

ಬೆಳಗಾವಿ ರಾಜಕಾರಣ, ‌ಡಿಕೆಶಿಯಿಂದ ಸರ್ಕಾರ ಬೀಳಲಿದೆ. ಲಾಟರಿ ಮಂತ್ರಿ, ಶಾಸಕರು ಯಾವಾಗಲೂ ಡೇಂಜರ್. ಸಿದ್ದರಾಮಯ್ಯ ಬಿಟ್ಟು ಡಿಕೆಶಿ ಸಿಎಂ ಆಗಿದ್ದರೆ ಒಂದು ಕೈ ನೋಡುತ್ತೇನೆ. ಎರಡು ವರ್ಷ ದೇವಾಲಯ, ಮನೆಯ ಕೆಲಸ ಮಾಡುತ್ತೇನೆ ಎಂದು ಡಿಕೆಶಿಗೆ ರಮೇಶ್ ಜಾರಕಿಹೊಳಿ ಟಕ್ಕರ್ ಕೊಟ್ಟರು.

RELATED ARTICLES

Related Articles

TRENDING ARTICLES