Wednesday, January 22, 2025

ಇಂದು ಲಂಕಾಗೆ ಅಫ್ಘಾನ್ ಸವಾಲ್ : ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆಲುವು ಯಾರಿಗೆ?

ಬೆಂಗಳೂರು : ವಿಶ್ವಕಪ್‌-2023 ಟೂರ್ನಿಯಲ್ಲಿ ಇಂದು ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಸೆಮಿಫೈನಲ್ ಹಾದಿ ಜೀವಂತವಾಗಿರಲಿದೆ.

ಇಲ್ಲಿಯವರೆಗೆ ಉಭಯ ತಂಡಗಳು ತಲಾ 2 ಪಂದ್ಯಗಳನ್ನು ಗೆದ್ದಿದ್ದು, ತಲಾ 4 ಅಂಕಗಳನ್ನು ಹೊಂದಿವೆ. ಆದರೆ, ಉತ್ತಮ ನೆಟ್​ ರನ್ ರೇಟ್‌ನಿಂದಾಗಿ ಶ್ರೀಲಂಕಾ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದರೆ, ಅಫ್ಘಾನಿಸ್ತಾನ ತಂಡ ಏಳನೇ ಸ್ಥಾನದಲ್ಲಿದೆ.

ಉಭಯ ತಂಡಗಳ ನಡುವಿನ 6ನೇ ಪಂದ್ಯ ಇದಾಗಿದ್ದು, ವಿಜೇತ ತಂಡವು ಒಟ್ಟು 6 ಅಂಕಗಳೊಂದಿಗೆ ಸೆಮಿಫೈನಲ್​ಗೆ ಇನ್ನಷ್ಟು ಹತ್ತಿರವಾಗಲಿದೆ. ಹಾಗೆಯೇ ಸೋತ ತಂಡಕ್ಕೆ ಸೆಮಿಸ್ ಹಾದಿ ಮತ್ತಷ್ಟು ಕಠಿಣವಾಗಲಿದೆ. ಅಫ್ಘಾನಿಸ್ತಾನವು ಇಂಗ್ಲೆಂಡ್ ಮತ್ತು ಪಾಕಿಸ್ತಾನದಂತಹ ಬಲಿಷ್ಠ ತಂಡಗಳನ್ನು ಸೋಲಿಸಿದೆ. ಹಾಗಾಗಿ, ಅಫ್ಘಾನಿಸ್ತಾನ ತಂಡವನ್ನು ಲಂಕನ್ನರು ಹಗುರವಾಗಿ ಪರಿಗಣಿಸುವಂತಿಲ್ಲ.

ಶ್ರೀಲಂಕಾ ತಂಡ

ಕುಸಲ್ ಮೆಂಡಿಸ್ (ನಾಯಕ) ಪಾತುಮ್ ನಿಸಂಕ, ಕುಸಾಲ್ ಪೆರೇರಾ, ಸದಿರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ್ ಡಿ ಸಿಲ್ವಾ, ಏಂಜೆಲೊ ಮ್ಯಾಥ್ಯೂಸ್, ಮಹೇಶ್ ತಿಕ್ಷಣ, ಕಸುನ್ ರಜಿತಾ, ದುಷ್ಮಂತ ಚಮೀರಾ, ದಿಲ್ಶನ್ ಮಧುಶಂಕ

ಅಫ್ಘಾನಿಸ್ತಾನ ತಂಡ

ಹಶಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ರಹಮತ್ ಷಾ, ಅಜ್ಮತುಲ್ಲಾ ಉಮರ್ಜಾಯ್, ಇಕ್ರಮ್ ಅಲಿಖಿಲ್, ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ನವೀನ್ ಉಲ್ ಹಕ್, ನೂರ್ ಅಹ್ಮದ್

RELATED ARTICLES

Related Articles

TRENDING ARTICLES