Monday, December 23, 2024

ಭಾರತ ತಂಡವನ್ನು ಹಾಡಿ ಹೊಗಳಿದ ಪಾಕ್ ಮಾಜಿ ನಾಯಕ ಶಾಹಿದ್ ಅಫ್ರಿದಿ

ಬೆಂಗಳೂರು : ಹಾಲಿ ಚಾಂಪಿಯನ್ಸ್ ಇಂಗ್ಲೆಂಡ್ ವಿರುದ್ಧ 100 ರನ್‌ಗಳ ಭರ್ಜರಿ ಜಯ ಸಾಧಿಸಿದ ಭಾರತ ತಂಡವನ್ನು ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಶಾಹಿದ್ ಅಫ್ರಿದಿ, ಟೀಂ ಇಂಡಿಯಾ ತುಂಬಾ ಬಲಿಷ್ಠವಾಗಿ ಕಾಣುತ್ತಿದೆ. ಪಂದ್ಯದಲ್ಲಿ ಅಂದುಕೊಂಡಂತೆ ಏನು ನಡೆಯದಿದ್ದರು ತಮ್ಮ ಸಾಮರ್ಥ್ಯದ ಮೇಲೆ ಹೇಗೆ ಗಮನಹರಿಸಬೇಕು ಎಂದು ಅವರಿಗೆ ತಿಳಿದಿದೆ ಎಂದು ಹೇಳಿದ್ದಾರೆ.

ತವರಿನಲ್ಲಿ ಇಂತಹ ಐಸಿಸಿ ಟೂರ್ನಿಗಳಲ್ಲಿ 6 ಪಂದ್ಯಗಳಲ್ಲಿ ಆರನ್ನು ಗೆಲ್ಲುವುದು ಕೇಂದ್ರೀಕೃತ ದೈಹಿಕ ಕೆಲಸ ಮತ್ತು ಮಾನಸಿಕ ಶಕ್ತಿಯ ಸಾಕ್ಷಿಯಾಗಿದೆ. ಇದಕ್ಕಾಗಿ ಟೀಂ ಇಂಡಿಯಾವನ್ನು ವಿಶ್ವಕಪ್ ಗೆಲ್ಲುವ ಫೆವರೇಟ್ ತಂಡ ಎನ್ನುವುದು ಎಂದು ಅಫ್ರಿದಿ ತಿಳಿಸಿದ್ದಾರೆ.

ವಿಶ್ವಕಪ್-2023 ಟೂರ್ನಿಯಲ್ಲಿ ಭಾರತದ ಗೆಲುವಿನ ನಾಗಾಲೋಟ ಮುಂದುವರಿದಿದೆ. ಇಂಗ್ಲೆಂಡ್​ ವಿರುದ್ಧ ಅಮೋಘ ಗೆಲುವು ಸಾಧಿಸುವ ಮೂಲಕ ಸತತ 6 ಪಂದ್ಯ ಗೆದ್ದಿದೆ. ಈ ಗೆಲುವಿನೊಂದಿಗೆ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಸತತ ಸೋಲುಗಳಿಂದ ತತ್ತರಿಸಿರುವ ಇಂಗ್ಲೆಂಡ್ 5ನೇ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದಿದೆ.

RELATED ARTICLES

Related Articles

TRENDING ARTICLES