Sunday, December 22, 2024

ಬಿಜೆಪಿಯವರ ಬಲಗೈ ಬಂಟರೇ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದಾರೆ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ವಿಧಾನಸೌಧವನ್ನು ವ್ಯಾಪಾರಸೌಧ ಮಾಡಿದ್ದು ಬಿಜೆಪಿಯವರು. ಬಿಜೆಪಿಯವರು ಪ್ರವಚನ ಮಾಡುವುದನ್ನು ನಿಲ್ಲಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪರೀಕ್ಷಾ ಅಕ್ರಮಗಳನ್ನು ನಾವು ಸಮರ್ಥವಾಗಿ ತಡೆದಿದ್ದೇವೆ. ಬಿಜೆಪಿಯವರ ಬಲಗೈ ಬಂಟರೇ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಪಿಎಸ್ಐ ಅಕ್ರಮ ನಡೆದಾಗ ಬಿಜೆಪಿಯವರಿಗೆ ಅಧಿಕಾರ ಇತ್ತು. ಆಗ ಯಾಕೆ ಯಾವುದನ್ನೂ ಪತ್ತೆ ಹಚ್ಚಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಚರ್ಚೆಯಾಗಿದ್ದು ಹುದ್ದೆ ಬಗ್ಗೆ ಅಲ್ಲ, ಮುದ್ದೆ ಬಗ್ಗೆ

ಗೃಹ ಸಚಿವ ಡಾ.ಜಿ ಪರಮೇಶ್ವರ್ ಮನೆಯಲ್ಲಿ ನಡೆದ ಔತಣಕೂಟದಲ್ಲಿ ಸಿಎಂ ಹುದ್ದೆ ವಿಚಾರವಾಗಿ ಚರ್ಚೆ ನಡೆದಿಲ್ಲ, ಬದಲಾಗಿ ರಾಗಿ ಮುದ್ದೆ ಬಗ್ಗೆ ಚರ್ಚೆ ನಡೆದಿದೆ. ಡಾ.ಜಿ. ಪರಮೇಶ್ವರ್ ಸಾಹೇಬರ ಮನೆಯಲ್ಲಿ ನಡೆದ ಚರ್ಚೆ ಬಗ್ಗೆ ಮಾಧ್ಯಮದವರಿಗೆ ಹೆಚ್ಚಿನ ಮಾಹಿತಿ ಇದ್ದಂತಿದೆ. ಆದ್ರೆ, ಆವತ್ತು ಚರ್ಚೆ ನಡೆದಿದ್ದು ಹುದ್ದೆ ಬಗ್ಗೆ ಅಲ್ಲ ಮುದ್ದೆ ಬಗ್ಗೆ. ನಮ್ಮ ನಾಯಕರನ್ನು ಪರಮೇಶ್ವರ್ ಅವರು ಊಟಕ್ಕೆ ಕರೆದಿದ್ರು ಅಷ್ಟೇ. ಇದರ ಬಗ್ಗೆ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಇನ್ನೊಂದು ದಿನ ಡಿಕೆಶಿ ಸಾಹೇಬ್ರೀಗೂ ಕರೀತಾರೆ

ಊಟದ ಬಗ್ಗೆ ನಂತರ ಏನೇನೋ ವ್ಯಾಖ್ಯಾನಗಳು ಆಗ್ತಿದೆ. ಆ ವ್ಯಾಖ್ಯಾನಗಳನ್ನು ಪರಮೇಶ್ವರ್ ಆಗಲಿ, ಸಿಎಂ ಆಗಲಿ, ಸತೀಶ್ ಜಾರಕಿಹೊಳಿ ಅವರಾಗಲಿ ಕೊಟ್ಟಿಲ್ಲ. ಆವತ್ತು ಅವರನ್ನು ಊಟಕ್ಕೆ ಕರೆದಿದ್ರು, ಇನ್ನೊಂದು ದಿನ ಡಿಕೆಶಿ ಸಾಹೇಬ್ರೀಗೂ ಕರೀತಾರೆ. ಮೊನ್ನೆಯ ಔತಣಕೂಟಕ್ಕೆ ಡಿಸಿಎಂ ಸಾಹೇಬ್ರು ಬರದಿದ್ದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES