Tuesday, January 14, 2025

ಬೆಂಗಳೂರಿನ ಪ್ರತಿಷ್ಠಿತ ಮಾಲ್​ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಮಾಲ್​ನಲ್ಲಿ ವ್ಯಕ್ತಿಯೋರ್ವ ಯುವತಿಯೋರ್ವಳಗೆ ಲೈಂಗಿಕ ಕಿರುಕುಳ ನೀಡಿರುವ ವಿಡಿಯೋ ವೈರಲ್ ಆಗಿದೆ.

ನಿನ್ನೆ ಸಂಜೆ ಆರೂವರೆ ಸುಮಾರಿಗೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ವೈರಲ್ ಆಗಿರುವ ವಿಡಿಯೋನಲ್ಲಿ ವ್ಯಕ್ತಿಯೋರ್ವ ಬೇಕಂತಲೇ ಯುವತಿಯ ಹಿಂಭಾಗಕ್ಕೆ ಮುಟ್ಟುವ ಮೂಲಕ ಅಸಹ್ಯವಾಗಿ ನಡೆದುಕೊಂಡಿದ್ದಾನೆ. ಈ ಘಟನೆ ನಿಶ್ಚಿತವಾಗಿ ಎಲ್ಲಿ ನಡೆದಿದೆ ಎಂದು ಪತ್ತೆಯಾಗಿಲ್ಲ. ಆದ್ರೆ, ಮೇಲ್ನೋಟಕ್ಕೆ ಬೆಂಗಳೂರಿನ ಲೂಲು ಮಾಲ್​ನಲ್ಲಿ ನಡೆದಿದೆ ಎನ್ನಲಾಗುತ್ತಿದೆ.

ಇನ್​ಸ್ಟಾಗ್ರಾಮ್​ ಖಾತೆಯಿಂದ ಈ ವಿಡಿಯೋ ಅಪ್ಲೋಡ್ ಆಗಿದೆ. ಗದ್ದಲ ಇರುವ ಕಡೆ ಈ ವ್ಯಕ್ತಿ ಮಹಿಳೆಯರು ಹಾಗೂ ಯುವತಿಯರ ಹಿಂದೆ ಓಡಾಡುತ್ತಿದ್ದ. ಇದನ್ನು ಗಮನಿಸಿ ಆತನನ್ನು ಫಾಲೋ ಮಾಡಿದೆ. ಬಳಿಕ ಈ ಘಟನೆ ಬಗ್ಗೆ ಸೆಕ್ಯೂರಿಟಿ ಗಾರ್ಡ್ ಹಾಗೂ ಮಾಲ್ ಮ್ಯಾನೇಜ್​ಮೆಂಟ್​ ಗಮನಕ್ಕೆ ತಂದಿದ್ದೇನೆ. ನಂತರ ಆತನನ್ನು ಸೆಕ್ಯೂರಿಟಿ ಗಾರ್ಡ್ ಹುಡುಕಾಡಿದ್ದಾರೆ. ಆದ್ರೆ, ಆ ವ್ಯಕ್ತಿ ಅಲ್ಲಿಂದ ನಾಪತ್ತೆಯಾಗಿದ್ದ ಎಂದು ಬರೆದುಕೊಂಡಿದ್ದಾರೆ. ಈ ಕುರಿತು ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

RELATED ARTICLES

Related Articles

TRENDING ARTICLES