Tuesday, November 5, 2024

ಕೇರಳ ಸ್ಫೋಟ : ಬಾಂಬ್ ಇಟ್ಟಿದ್ದ ವ್ಯಕ್ತಿ ಪೊಲೀಸರಿಗೆ ಶರಣು, ಆರೋಪಿ ಡೊಮಿನಿಕ್ ಮಾರ್ಟಿನ್ ಹೇಳಿದ್ದೇನು?

ಬೆಂಗಳೂರು : ಕೇರಳದ ಎರ್ನಾಕುಲಂನ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಐಇಡಿ ಸ್ಫೋಟದಲ್ಲಿ ಭಯೋತ್ಪಾದಕರ ಕೈವಾಡವಿರುವ ಶಂಕೆಯ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ರಾಜ್ಯಾದ್ಯಂತ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಈ ನಡುವೆ ಕೊಚ್ಚಿಯ ವ್ಯಕ್ತಿಯೊಬ್ಬ ಸ್ಫೋಟದ ಹೊಣೆ ಹೊತ್ತು ಪೊಲೀಸರಿಗೆ ಶರಣಾಗಿದ್ದಾನೆ.

ಡೊಮಿನಿಕ್ ಮಾರ್ಟಿನ್ ಎಂಬ ವ್ಯಕ್ತಿ ಕನ್ವೆನ್​ಷನ್​ ಸೆಂಟರ್​ನಲ್ಲಿ ಬಾಂಬ್ ಇಟ್ಟಿರುವುದಾಗಿ ಒಪ್ಪಿಕೊಂಡು ಇದೀಗ ಪೊಲೀಸರಿಗೆ ಶರಣಾಗಿದ್ದಾನೆ. ಭಾನುವಾರ ಬೆಳಗ್ಗೆ ಕ್ರಿಶ್ಚಿಯನ್ನರ ಸಭೆಯೊಂದರ ಸಮಯದಲ್ಲಿ ಟಿಫಿನ್​ ಬಾಕ್ಸ್​ನಿಂದ ಮೊದಲ ಸ್ಫೋಟ ಸಂಭವಿಸಿತ್ತು. ಈ ಸ್ಫೋಟದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರೆ, ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಡೊಮಿನಿಕ್ ಮಾರ್ಟಿನ್ ಹೇಳಿದ್ದೇನು?

ನನ್ನ ಹೆಸರು ಮಾರ್ಟಿನ್. ಕೇರಳದ ಕಳಮಶ್ಶೇರಿಯಲ್ಲಿರುವ ಕನ್ವೆನ್ಸನ್ ಸೆಂಟರ್‌ನಲ್ಲಿ ಯಹೋವನ ಸಾಕ್ಷಿಗಳ ಪ್ರಾರ್ಥನಾ ಸಭೆಯಲ್ಲಿ ನಡೆದ ಬಾಂಬ್ ಸ್ಫೋಟ ಘಟನೆಯ ಸಂಪೂರ್ಣ ಹೊಣೆಯನ್ನು ನಾನು ಹೊತ್ತುಕೊಳ್ಳುತ್ತಿದ್ದೇನೆ. ಯಾಕಾಗಿ ನಾನು ಈ ಬಾಂಬ್ ಸ್ಫೋಟ ನಡೆಸಿದೆ ಎಂಬುದನ್ನು ವಿವರಿಸಲು ಈ ವಿಡಿಯೋ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ.

ಯಹೋವನ ಸಾಕ್ಷಿಗಳ ಗುಂಪಿನಲ್ಲಿ ನಾನು ಕಳೆದ 16 ವರ್ಷಗಳಿಂದ ಗುರುತಿಸಿಕೊಂಡಿದ್ದೆ. ಆದರೆ, ಕಳೆದ ಆರು ವರ್ಷಗಳ ಹಿಂದೆ ಈ ಪಂಗಡವು ತಪ್ಪಾದ ಪಂಗಡವೆಂದು ನನಗೆ ಅರಿವಾಯಿತು. ನೀವು ಬೋಧಿಸುತ್ತಿರುವ ವಿಚಾರಗಳು ತಪ್ಪು ಎಂದು ಸಂಬಂಧಪಟ್ಟವರಲ್ಲಿ ತಿಳಿಸಿದೆ. ಆದರೆ, ಅವರು ಅದಕ್ಕೆ ಮನ್ನಣೆ ನೀಡಲಿಲ್ಲ. ಇವರು ಈ ದೇಶದಲ್ಲಿದ್ದುಕೊಂಡು ಈ ದೇಶದ ಜನರೊಂದಿಗೆ ಬೆರೆಯಬಾರದು, ಅವರು ವೇಶ್ಯೆಯಂತೆ, ಅವರೊಂದಿಗೆ ವ್ಯವಹರಿಸಬಾರದು ಎಂದು ಬೋಧಿಸುತ್ತಾರೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾನೆ.

RELATED ARTICLES

Related Articles

TRENDING ARTICLES