ಬೆಂಗಳೂರು: ಈರುಳ್ಳಿ ಬೆಲೆ ಹೆಚ್ಚಳವನ್ನು ನಿಯಂತ್ರಿಸಲು ಸರ್ಕಾರ ಕನಿಷ್ಠ ರಫ್ತು ಬೆಲೆ ನಿಗದಿ ಮಾಡಿದೆ.
ಈರುಳ್ಳಿಯ ಕನಿಷ್ಠ ರಫ್ತು ಬೆಲೆ ಟನ್ಗೆ 800 ಡಾಲರ್ ನಿಗದಿ ಮಾಡಿದೆ. ಅಂದರೆ, ಟನ್ಗೆ 66,000 ರೂನಷ್ಟು ಕನಿಷ್ಠ ರಫ್ತು ಬೆಲೆ ಇದೆ. ಇದು ಡಿಸೆಂಬರ್ 31ರವರೆಗೂ ಇರಲಿದೆ.
ದೇಶಾದ್ಯಂತ ಈರುಳ್ಳಿ ಬೆಲೆ ಈಗಾಗಲೇ ಕಿಲೋಗೆ 50 ರೂಗಿಂತ ಹೆಚ್ಚಿನ ಮಟ್ಟದಲ್ಲಿದೆ. ವರದಿಗಳ ಪ್ರಕಾರ ದೀಪಾವಳಿ ಹಬ್ಬದ ವೇಳೆಗೆ ಈರುಳ್ಳಿ ಬೆಲೆ ಶತ ರೂಪಾಯಿ ಗಡಿ ದಾಟುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈರುಳ್ಳಿ ಕೊರತೆ ಸೃಷ್ಟಿಯಾಗಿ ಬೆಲೆ ಕೈಮೀರಿ ಹೋಗದಂತೆ ತಡೆಯಲು ಈರುಳ್ಳಿಗೆ ರಫ್ತು ಬೆಲೆ ನಿಗದಿ ಮಾಡಲಾಗಿದೆ.
ಇದನ್ನೂ ಓದಿ: ಜಾತಿಗಣತಿ ವರದಿ ಸ್ವೀಕಾರಕ್ಕೆ ಬದ್ಧ: ಸಿಎಂ ಸಿದ್ದರಾಮಯ್ಯ
ರಾಜಧಾನಿ ದೆಹಲಿಯಲ್ಲಿ ರೀಟೆಲ್ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕಿಲೋಗೆ 80 ರೂವರೆಗೂ ಮಾರಾಟವಾಗುತ್ತಿದೆ. ಮದರ್ ಡೈರಿ ಸಂಸ್ಥೆ ದೆಹಲಿ ಎನ್ಸಿಆರ್ ಪ್ರದೇಶದಲ್ಲಿ ಹೊಂದಿರುವ ತನ್ನ 400 ಸಫಲ್ ರೀಟೇಲ್ ಸ್ಟೋರ್ಗಳಲ್ಲಿ ಈರುಳ್ಳಿಯನ್ನು 67 ರೂಗೆ ಮಾರುತ್ತಿದೆ. ಬಿಗ್ ಬ್ಯಾಸ್ಕೆಟ್ ಇತ್ಯಾದಿ ಇಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲೂ ಈರುಳ್ಳಿ ಬೆಲೆ 67 ರೂ ಇದೆ.