Monday, December 23, 2024

ಮಂಜುನಾಥನ ಆಶೀರ್ವಾದ ಫಲವೇ ಪವರ್ ಟಿವಿ : ರಾಕೇಶ್ ಶೆಟ್ಟಿ

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ನಡೆದ ಧರ್ಮ ಸಂರಕ್ಷಣಾ ಸಮಾರೋಪ ಕಾರ್ಯಕ್ರಮದಲ್ಲಿ ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿ ಭಾಗಿಯಾಗಿದ್ದರು.

ಇನ್ನು ಧರ್ಮಸ್ಥಳದಲ್ಲಿ ಧರ್ಮ ಸಂರಕ್ಷಣಾ ಪಾದಯಾತ್ರೆ ಉದ್ದೇಶಿಸಿ ಮಾತನಾಡಿದ ಅವರು, ಇದು ಮಂಜುನಾಥನ ಭಕ್ತರ ಯುದ್ಧ. ಅಣ್ಣಪ್ಪ ಸ್ವಾಮಿಯ ಭಕ್ತರ ಯುದ್ಧ. ಧರ್ಮಾಧಿಕಾರಿಗಳು ನಡೆದಾಡುವ ಮಂಜುನಾಥಸ್ವಾಮಿಯಂತೆ ಎಂದರು.

ಕೊಲ್ಲೂರಿನಿಂದ ಬಂದ ಭಕ್ತರಿಗೆ ಅಭಿನಂದನೆ ತಿಳಿಸಿದ ರಾಕೇಶ್ ಶೆಟ್ಟಿ ಅವರು, ಮಂಜುನಾಥನ ಆಶೀರ್ವಾದ ಫಲವೇ ನಮ್ಮ ಪವರ್ ಟಿವಿ. ಮಾನವ ಯಾವಾಗ ದೇವರು ಆಗ್ತಾರೆ ಎಂಬುದನ್ನು ನೋಡಿದೆ ಎಂದು ಡಾ. ವೀರೇಂದ್ರ ಹೆಗ್ಗಡೆಯವರ ಬಗ್ಗೆ ರಾಕೇಶ್ ಶೆಟ್ಟಿ ಶ್ಲಾಘಿಸಿದರು. ಇದೇ ವೇಳೆ ಹರ ಹರ ಮಹಾದೇವ ಎಂದು ಶ್ರೀ ಮಂಜುನಾಥನಿಗೆ ಪುಷ್ಪಾರ್ಚನೆ ಮಾಡಿದರು.

ನಿಮ್ಮ ಒಗ್ಗಟ್ಟು ಯಾವಾಗಲೂ ಇರಲಿ

ನಮಗೆ ಸಹಾಯ ಮಾಡಲು ಬಂದಿದ್ದಾರೆ. ನಿಮ್ಮ ಒಗ್ಗಟ್ಟು ಯಾವಾಗಲೂ ಇರಲಿ ಎಂದು ಡಾ. ವೀರೇಂದ್ರ ಹೆಗ್ಗಡೆ ಪರೋಕ್ಷವಾಗಿ ರಾಕೇಶ್ ಶೆಟ್ಟಿ ಹಾಗೂ ಇಡೀ ಪವರ್ ಟಿವಿ ತಂಡಕ್ಕೆ ಧನ್ಯವಾದ ತಿಳಿಸಿದರು. ಅಪವಾದಗಳು ಬಂದಿದ್ದರಿಂದ ಎಲ್ಲರೂ ಪ್ರಾರ್ಥನೆ ಮಾಡಿದರು. ಧರ್ಮಕ್ಷೇತ್ರಕ್ಕೆ ಆಪತ್ತು ಬಂದಾಗ ನೀವು ಪ್ರಾರ್ಥನೆ ಮಾಡಿದ್ರಿ ನಿಮ್ಮೆಲ್ಲರಿಂದಾಗಿ ನಾನು ಇಂದು ನಿಶ್ಚಿಂತೆಯಿಂದ ಇದ್ದೇನೆ. ಇನ್ನಷ್ಟು ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES