Sunday, November 3, 2024

ಯಡಿಯೂರಪ್ಪ ಮಗ ಅಂತ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಬೇಡಿ : ರೇಣುಕಾಚಾರ್ಯ

ಬೆಂಗಳೂರು : ಪಕ್ಷ ಸಂಘಟನೆ ಗಟ್ಟಿ ಆಗಲು ಶಾಸಕ ಬಿ.ವೈ ವಿಜಯೇಂದ್ರ ಅಧ್ಯಕ್ಷ ಆಗಬೇಕು ಅಂತ ಜನರು ಮಾತನಾಡುತ್ತಿದ್ದಾರೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಮಗ ಅಂತ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಬೇಡಿ. ಸ್ವಂತ ವರ್ಚಸ್ಸಿನ ಯುವ ನಾಯಕ ವಿಜಯೇಂದ್ರ ಎಂದು ವಿಜಯೇಂದ್ರ ಪರ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಬ್ಯಾಟಿಂಗ್ ಮಾಡಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ರೆ ನಿಭಾಯಿಸ್ತಾರೆ. ಅವರ ಪರ ಮಾತನಾಡಿದ್ರೆ ಟೀಕೆ ಮಾಡಬಹುದು. ಆದರೆ, ಯಡಿಯೂರಪ್ಪಗೆ ಪುತ್ರ ವ್ಯಾಮೋಹ ಇಲ್ಲ. ಯಡಿಯೂರಪ್ಪ ಅವರು ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿ ಅಂತ ವರಿಷ್ಠರ ಬಳಿ ಕೇಳಿಲ್ಲ. ವಿಜಯೇಂದ್ರಗೂ ವೈಯಕ್ತಿಕ ಹಿತ ಇಲ್ಲ, ಕಾರ್ಯಕರ್ತರು ಅವರನ್ನು ಬಯಸುತ್ತಿದ್ದಾರೆ ಎಂದು ತಿಳಿಸಿದರು.

ರಾಜಕೀಯದಲ್ಲಿ ಗಾಡ್ ಫಾದರ್ ಬೇಕು. ಯಡಿಯೂರಪ್ಪ ಅವರಿಗೆ ಆ ಸಾಮರ್ಥ್ಯ ಇತ್ತು. ಯಡಿಯೂರಪ್ಪ ಅವರ ನಾಯಕತ್ವ ಪಕ್ಷ ಗಟ್ಟಿಗೊಳಿಸಿದೆ. ಈಗಿನ ಪರಿಸ್ಥಿತಿಗೆ ಈಗಾಗಲೇ ಕೆಲವರು ಪಕ್ಷದಿಂದ ಹೊರಗೆ ಹೋಗಿದ್ದಾರೆ. ಅಭದ್ರತೆಯಿಂದ ಯಾರು ಬೇಕಾದರೂ ಪಕ್ಷ ಬಿಟ್ಟು ಹೋಗಬಹುದು ಎಂದು ಹೇಳಿದರು.

ಬಹಳ ಜನ ಬೇಸತ್ತು ಹೋಗಿದ್ದಾರೆ

ಬಿಜೆಪಿಯಲ್ಲಿ ಕೆಲವರ ದುರಹಂಕಾರದಿಂದ ಬಹಳ ಜನ ಬೇಸತ್ತು ಹೋಗಿದ್ದಾರೆ. ಬೇಸತ್ತು ಹೋಗಿರೋರೂ ಮುಂದೆ ಪಕ್ಷ ಬಿಡಬಹುದು. ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗಿದೆ ಅಂತ ಜನ ಮಾತನಾಡುತ್ತಿದ್ದಾರೆ. ನಾನು ಹೇಳ್ತಿಲ್ಲ, ಜನ ಹಾಗೆ ಹೇಳುತ್ತಿದ್ದಾರೆ. ಹಲವರು ಪಕ್ಷದಲ್ಲಿ ಮಾತನಾಡಲು ಭಯ ಪಡುತ್ತಿದ್ದಾರೆ. ಬಿಜೆಪಿಗೆ ಮಧ್ಯದಲ್ಲಿ ಯಾರು ಬಂದಿದ್ದಾರೋ ಅವರ ಆಟವೇ ಜಾಸ್ತಿ ಆಗ್ತಿದೆ ಎಂದು ಮತ್ತೆ ಸ್ವಪಕ್ಷದವರ ವಿರುದ್ಧವೇ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES