Wednesday, January 22, 2025

ಹುಲಿ ಉಗುರು ಸರ್ಕಾರಕ್ಕೆ ಒಪ್ಪಿಸಲು ಎರಡು ತಿಂಗಳು ಗಡುವು : ಸಚಿವ ಈಶ್ವರ್ ಖಂಡ್ರೆ

ಬೀದರ್ : ಹುಲಿ ಉಗುರು ಮತ್ತು ಇತರ ವನ್ಯಜೀವಿ ಉತ್ಪನ್ನಗಳನ್ನು ಮನೆಯಲ್ಲಿಟ್ಟು ಕೊಂಡಿರುವವರು ಅವುಗಳನ್ನು ಸರ್ಕಾರಕ್ಕೆ ಒಪ್ಪಿಸಲು ಅರಣ್ಯ ಇಲಾಖೆ ಎರಡು ತಿಂಗಳು ಗಡುವು ನೀಡಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಬೀದರ್​​​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2022 ತಿದ್ದುಪಡಿ ಅನ್ವಯ ವನ್ಯಜೀವಿ ಉತ್ಪನ್ನಗಳನ್ನು ಮನೆಯಲ್ಲಿಟ್ಟುಕೊಳ್ಳುವುದು, ಧರಿಸುವುದು, ಬಳಸುವುದು, ಸಂಗ್ರಹ-ಸಾಗಾಣಿಕೆ ಮತ್ತು ಮಾರಾಟ ಶಿಕ್ಷಾರ್ಹ ಅಪರಾಧಗಳಾಗಿವೆ ಎಂದು ತಿಳಿಸಿದ್ದಾರೆ.

ವರ್ತೂರು ಸಂತೋಷ್ ಪ್ರಕರಣ ಜರುಗುವ ಮೊದಲು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಬಗ್ಗೆ ಸಾರ್ವಜನಿಕವಾಗಿ ಜಾಗೃತಿ ಇರಲಿಲ್ಲ. ಪ್ರಕರಣದ ಬಳಿಕ ಎಲ್ಲರಿಗೂ ಗೊತ್ತಾಗಿರುವುದರಿಂದ ಅವುಗಳನ್ನು ಹೊಂದಿರುವವವರು ಸರ್ಕಾರಕ್ಕೆ ಸರೆಂಡರ್ ಮಾಡಲು ಎರಡು ತಿಂಗಳು ಕಾಲಾವಕಾಶ ನೀಡಲಾಗಿದೆ. ಅಲ್ಲದೇ, ಗಡುವು ತೀರಿದ(ಮುಗಿದ) ಬಳಿಕ ಸರ್ಕಾರ ಒಂದು ಸುತ್ತೋಲೆಯನ್ನು ಹೊರಡಿಸಲಿದೆ ಎಂದು ಈಶ್ವರ್ ಖಂಡ್ರೆ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES