Sunday, December 22, 2024

ಮೋದಿ ತಮ್ಮ ಬಳಿ ಇರುವ ಎಲ್ಲಾ ಅಸ್ತ್ರಗಳನ್ನು ಬಳಸುತ್ತಿದ್ದಾರೆ : ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ : ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬಳಿ ಇರುವ ಎಲ್ಲಾ ಅಸ್ತ್ರಗಳನ್ನು ರಾಜಕೀಯವಾಗಿ ಬಳಸುತ್ತಿದ್ದಾರೆ. ಆದರೆ, ಮೋದಿ ಅವರ ಹೆದರಿಕೆಗೆ ನಮ್ಮ ತತ್ವ ಬಿಡಲ್ಲ. ಈ ಚುನಾವಣೆ ಬಳಿಕ ಎಲ್ಲದಕ್ಕೂ ಸಹ ಉತ್ತರ ಕೊಡುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಕಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಂಚರಾಜ್ಯ ಚುನಾವಣೆಯಲ್ಲಿ ಎಲ್ಲಾ ಕಡೆ ಒಳ್ಳೆಯ ವಾತಾವರಣವಿದೆ. ಆದರೆ, ಪ್ರಧಾನಿ ಮೋದಿ ಸರ್ಕಾರ ಇಡಿ ದಾಳಿ‌ ಮಾಡಿ ನಮ್ಮ ಸಿಎಂ‌, ಮಂತ್ರಿ ಹಾಗೂ ಕಾರ್ಯಕರ್ತರ ಶಕ್ತಿ ಕುಂದಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಎಐಸಿಸಿ ಅಧ್ಯಕ್ಷನಾಗಿ ಒಂದು ವರ್ಷ ಪೂರೈಸಿದ್ದೇನೆ. ನನಗೆ ಕೊಟ್ಟ ಕೆಲಸವನ್ನು ನಾನು ಸರಿಯಾಗಿ ನಿಭಾಯಿಸಿದ್ದೇನೆ. ಯಾರಿಗೂ ಸಹ ಕೆಟ್ಟ ಕೆಲಸ ಮಾಡಿಲ್ಲ. ಪ್ರಾಮಾಣಿಕವಾಗಿ ಹಾಗೂ ದಕ್ಷತೆಯಿಂದ ಕೆಲಸ ಮಾಡಿದ್ದೇನೆ. ಎರಡನೇ ವರ್ಷದಲ್ಲಿ ತೆಲಂಗಾಣ ಸೇರಿದಂತೆ ಅನೇಕ ಚುನಾವಣೆಗಳಿವೆ. ಎರಡನೇ ವರ್ಷದಲ್ಲಿ ಸವಾಲುಗಳಿವೆ ಅದನ್ನು ಬಗೆಹರಿಸುತ್ತೇನೆ. ಆಗ ಮಾತ್ರ ಹೆಸರು ಬರುತ್ತದೆ. ಯಾವ ಸಮಸ್ಯೆ ಕೂಡ ನನಗೂ ಕಠಿಣ ಅನ್ನಿಸುತ್ತಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಇಬ್ಬರು ಸಿಎಂ ಚರ್ಚೆ ವಿಚಾರ ಕುರಿತು ಮಾತನಾಡಿದ ಅವರು, ಅದನ್ನು ಸಿಎಂ‌ ಸಿದ್ದರಾಮಯ್ಯ ಬರ್ತಾರೆ ಅವರನ್ನೇ ಕೇಳಿ ಎಂದು ಮಲ್ಲಿಕಾರ್ಜುನ ಖರ್ಗೆ ಜಾಣ್ಮೆಯ ಉತ್ತರ ನೀಡಿದ್ದಾರೆ.

RELATED ARTICLES

Related Articles

TRENDING ARTICLES