Wednesday, January 22, 2025

ಶುಭಾ ಪೂಂಜಾ ಜೊತೆ ಕಿಡಿಗೇಡಿಗಳ ಅಸಭ್ಯ ವರ್ತನೆ!

ಚಿಕ್ಕಮಗಳೂರು: ಸ್ಯಾಂಡಲ್​ವುಡ್​​ ನಟಿ ಶುಭಾ ಪೂಂಜಾ ಹಾಡಿನ ಚಿತ್ರೀಕರಣದಲ್ಲಿದ್ದ ವೇಳೆ ನಟಿಯೊಂದಿಗೆ ಕಿಡಿಗೇಡಿಗಳು ಅಸಭ್ಯ ವರ್ತಿಸಿ, ಶೂಟಿಂಗ್‌ ಸೆಟ್‌ ಧ್ವಂಸಗೊಳಿಸಿರುವ ಘಟನೆ ನಡೆದಿದೆ ಎನ್ನಲಾಗುತ್ತಿದೆ.

ಸುಧೀರ್ ಅತ್ತಾವರ ನಿರ್ದೇಶನದಲ್ಲಿ ಕೊರಗಜ್ಜ ಚಿತ್ರ ಮೂಡಿಬರುತ್ತಿದ್ದು, ಶುಭಾ ಪೂಂಜಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನ ಚಿತ್ರೀಕರಣ ಮಾಡುವ ವೇಳೆಯಲ್ಲಿ ಅಪರಿಚಿತ ಯುವಕರ ಗುಂಪು ಕೈ ಹಿಡಿದು ಎಳೆದಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ. ಯುವಕರ ಅಸಭ್ಯ ವರ್ತನೆಯಿಂದ ಚಿತ್ರತಂಡ ತಕ್ಷಣ ಹಾಡಿನ ಚಿತ್ರೀಕರಣ ನಿಲ್ಲಿಸಿದೆ.

ಇದನ್ನೂ ಓದಿ: ಇಂದು ಚಂದ್ರಗ್ರಹಣ ಹಿನ್ನಲೆ ಹಲವು ದೇಗುಲಗಳು ಬಂದ್‌!

ಕುದುರೆಮುಖದ ಮೈದಾಡಿಗುಡ್ಡ ಪ್ರದೇಶದಲ್ಲಿ ಕೊರಗಜ್ಜ ಚಿತ್ರದ ಹಾಡಿನ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ. ಬಾಲಿವುಡ್ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಜೊತೆ ಶುಭಾ ಚಿತ್ರೀಕರಣದಲ್ಲಿ ತೊಡಗಿದ್ದರು. ಈ ಘಟನೆ ಕುದುರೆಮುಖ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುತ್ತದೆ. ಘಟನೆ ಬಗ್ಗೆ ಚಿತ್ರತಂಡ ಈವರೆಗೂ ಪೊಲೀಸರಿಗೆ ದೂರು ನೀಡಿಲ್ಲ ಎಂದು ತಿಳಿದುಬಂದಿದೆ.

RELATED ARTICLES

Related Articles

TRENDING ARTICLES