Monday, December 23, 2024

ಬಿಜೆಪಿ ಅಧಿಕಾರಕ್ಕೆ ಬಂದ್ರೆ OBC ನಾಯಕನಿಗೆ CM ಪಟ್ಟ

ಹೈದರಾಬಾದ್​​​​ : ತೆಲಂಗಾಣದಲ್ಲಿ ಚುನಾವಣೆ ಕಾವು ಏರತೊಡಗಿದೆ. ನವೆಂಬರ್‌ 30ರಂದು ತೆಲಂಗಾಣ ವಿಧಾನಸಭೆ ಚುನಾವಣೆ  ನಡೆಯಲಿದೆ. ಇದಕ್ಕಾಗಿ ವಿವಿಧ ರಾಜಕೀಯ ಪಕ್ಷಗಳು ಈಗಾಗಲೇ ಅಖಾಡಕ್ಕೆ ಇಳಿದಿವೆ.

ಈ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಒಬಿಸಿ ಮುಖ್ಯಮಂತ್ರಿ ಆಯ್ಕೆಯ ದಾಳ ಉರುಳಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಒಬಿಸಿ ಅಭ್ಯರ್ಥಿಗೆ ಸಿಎಂ ಪಟ್ಟ ನೀಡುವುದುದಾಗಿ ಘೋಷಿಸಿದ್ದಾರೆ. ಹೈದರಾಬಾದ್​​​​ನಲ್ಲಿ ಮಾತನಾಡಿದ ಅವರು, ಆಡಳಿತರೂಢ BRS ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ಒಂಬತ್ತೂವರೆ ವರ್ಷಗಳಿಂದ ಆಡಳಿತರೂಢ BRS ಪಕ್ಷ ದಲಿತರು, ಬುಡಕಟ್ಟು ಸಮುದಾಯದವರು ಮತ್ತು ಒಬಿಸಿ ವರ್ಗಗಳನ್ನು ವಂಚಿಸುತ್ತಿದೆ. ಬಡವರ ಮತ್ತು ದುರ್ಬಲ ವರ್ಗಗಳ ವಿರೋಧಿ BRS ತನ್ನ ಆಶ್ವಾಸನೆಯನ್ನು ಪೂರೈಸಲು ವಿಫಲವಾಗಿದೆ. ಪ್ರತಿ ದಲಿತ ಕುಟುಂಬಕ್ಕೆ 3 ಎಕರೆ ಭೂಮಿ ಹಂಚುವ ಭರವಸೆ ಇನ್ನೂ ಈಡೇರಿಲ್ಲ ಎಂದು ಅಮಿತ್‌ ಶಾ ಟೀಕಿಸಿದರು.

ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಪಕ್ಷವು ರಾಮ ಮಂದಿರವನ್ನು ವಿಳಂಬ ಮಾಡುತ್ತಿದೆ, ತಡೆ ಹಿಡಿಯುತ್ತಿದೆ ಮತ್ತು ಬೇರೆಡೆಗೆ ತಿರುಗಿಸುತ್ತಿದೆ. ಮಧ್ಯಪ್ರದೇಶದ ಜನರು ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ನೀಡುವ ಮೂಲಕ ಮೋದಿ ಜಿ ಅವರನ್ನು ಎರಡನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡಿದರು. ಮೋದಿ ಅವರು ಅಯೋಧ್ಯೆಯ ಶ್ರೀರಾಮ ಮಂದಿರದ ಭೂಮಿಪೂಜೆ ಮಾಡಿದರು. 2024ರ ಜನವರಿ 22 ರಂದು ರಾಮಲಾಲಾ ಅಲ್ಲಿ ಸ್ಥಾಪನೆಯಾಗಲಿದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES