Sunday, January 19, 2025

ಕಿವೀಸ್ ವಿರುದ್ಧ ಆಸಿಸ್​ಗೆ 5 ರನ್​ಗಳ ವಿರೋಚಿತ ಗೆಲುವು

ಬೆಂಗಳೂರು : ವಿಶ್ವಕಪ್​ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವೆ ಇಂದು ನಡೆದ ಹೈವೋಲ್ಟೇಜ್​ ಪಂದ್ಯದಲ್ಲಿ ಆಸಿಸ್​ 5 ರನ್​ಗಳ ವಿರೋಚಿತ ಗೆಲುವು ದಾಖಲಿಸಿತು.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್​ನ 27ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 388 ರನ್​ ಕಲೆಹಾಕಿತ್ತು. 389 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ನ್ಯೂಜಿಲೆಂಡ್ ಕೊನೆಯ ಎಸೆತದ ವರೆಗೂ ಹೋರಾಡಿ ವಿರೋಚಿತ ಸೋಲು ಕಂಡಿತು.

ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ ನ್ಯೂಜಿಲೆಂಡ್ 383 ರನ್​ ಗಳಿಸಿ 5 ರನ್​ಗಳಿಂದ ಸೋಲು ಅನುಭವಿಸಿತು. ಕಿವೀಸ್ ಪರ ರಚಿನ್ ರವೀಂದ್ರ (116) ಶತಕ ಸಿಡಿಸಿ ಮಿಂಚಿದರು. ಮಿಚೆಲ್ 54, ನೀಶಮ್ 58 ರನ್​ ಗಳಿಸಿದರು. ಆದರೆ, ಕಿವೀಸ್​ನ ಉಳಿದ ಯಾವೊಬ್ಬ ಬ್ಯಾಟರ್​ ಸಹ ಆಸಿಸ್​ ಬೌಲರ್​ಗಳ ಮಾರಕ ದಾಳಿಯನ್ನು ಸಮರ್ಥವಾಗಿ ಎದುರಿಸಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ವಿಫಲರಾದರು. ಆಸ್ಟ್ರೇಲಿಯಾ ಪರ ಆಡಂ ಝಂಪಾ 3, ಜೋಶ್ ಹೇಜಲ್‌ವುಡ್ ಹಾಗೂ ನಾಯಕ ಪ್ಯಾಟ್ ಕಮಿನ್ಸ್ ತಲಾ 2, ಮ್ಯಾಕ್ಸ್​ವೆಲ್ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES