Wednesday, January 22, 2025

ICC WorldCup 2023: 156 ರನ್​​ಗಳಿಗೆ ಇಂಗ್ಲೆಂಡ್​ ತಂಡವನ್ನು ಕಟ್ಟಿಹಾಕಿದ ಲಂಕನ್ನರು!

ಬೆಂಗಳೂರು/ ವಿಶ್ವಕಪ್​ ಕ್ರಿಕೆಟ್ 2023 : ಇಂಗ್ಲೆಂಡ್​ ಮತ್ತು ಶ್ರೀಲಂಕಾ ನಡುವೆ ಇಂದು ನಡೆದ ಪಂದ್ಯದಲ್ಲಿ ಉತ್ತಮ ಬೌಲಿಂಗ್​ ಪ್ರದರ್ಶನದೊಂದಿಗೆ ಇಂಗ್ಲೆಂಡ್​ ತಂಡವನ್ನು ಕೇವಲ 156 ರನ್​ಗಳಿಗೆ ಕಟ್ಟಿಹಾಕುವಲ್ಲಿ ಲಂಕಾ ಆಟಗಾರರು ಯಶಸ್ವಿಯಾಗಿದ್ದಾರೆ.

ವಿಶ್ವಕಪ್​ 2023 ರ 25ನೇ ಪದ್ಯವು ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು, ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡ ಕೇವಲ 33.2 ಓವರ್​ ಗಳಲ್ಲಿ ತನ್ನೆಲ್ಲಾ ವಿಕೆಟ್​ಗಳನ್ನು ಕಳೆದುಕೊಂಡು 156 ರನ್​ ಗಳನ್ನು ಗಳಿಸಿತು ಮಾತ್ರ ಶಕ್ತವಾಯಿತು.

ಇದನ್ನೂ ಓದಿ: ನಿಮ್ಮನ್ನ ರಂಜಿಸಿದ್ದಕ್ಕೆ ನೀಡುವ ಉಡುಗೊರೆ ಇದೇನಾ: ಜಗ್ಗೇಶ್​ ಟ್ವೀಟ್​ ವೈರಲ್

ಶ್ರೀಲಂಕಾ ಪರ ಬೌಲಿಂಗ್​ ಮಾಡಿದ ಲಹಿತು ಕುಮಾರ 3 ವಿಕೆಟ್​ ಪಡೆದರೇ, ಏಂಜೆಲೋ ಮ್ಯಾಥ್ಯೂಸ್​, ಕುಶಾಲ್ ರಜಥಾ, ತಲಾ ಎರಡು ವಿಕೆಟ್​ ಪಡೆದರು, ಮಹಿಷಾ ತೀಕ್ಷಣ 1 ವಿಕೆಟ್​ ಪಡೆದಿದ್ದಾರೆ.

ವಿಶ್ವಕಪ್​ 2023 ರ ಅಂಕಪಟ್ಟಿಯಲ್ಲಿ ಆಡಿರುವ 5 ಪಂದ್ಯಗಳಲ್ಲಿ ಕೇವಲ ಒಂದು ಜಯವನ್ನು ಮಾತ್ರ ಸಾಧಿಸಿರುವ ಎರಡೂ ತಂಡಗಳಿಗೂ ಇಂದಿನ ಪಂದ್ಯ ಮಹತ್ವದ್ದಾಗಿದೆ. ಸೆಮಿಫೈನಲ್​ನ ಕನಸು ಜೀವಂತವಾಗಿರಿಸಿಕೊಳ್ಳಲು ಇಬ್ಬರಿಗೂ ಈ ಪಂದ್ಯ ಗೆಲ್ಲುವುದು ಅನಿವಾರ್ಯವಾಗಿದೆ.

RELATED ARTICLES

Related Articles

TRENDING ARTICLES