Wednesday, January 22, 2025

ಗಾಳಿಯಲ್ಲಿ ಗುಂಡು ಹೊಡೆಯೋದು ಬೇಡ ಟೈಂ ಫಿಕ್ಸ್​ ಮಾಡಿ: ಡಿಕೆಶಿ

ಬೆಂಗಳೂರು : ನಾನೇನ್ ಮಾಡಿದ್ಧೇನೆ ಅವರೇನ್​ ಮಾಡಿದ್ದಾರೆ ಎಲ್ಲವನ್ನು ಬಿಚ್ಚಿ ಮಾತನಾಡೋಣ ಚರ್ಚೆಗೆ ಟೈಂ ಫಿಕ್ಸ್​ ಮಾಡಿ ನಾನು ಸಿದ್ದ ಎಂದು ಡಿಸಿಎಂ ಡಿಕೆ ಶಿವಕುಮಾರ್​ ಅವರು ತಿಳಿಸಿದರು.

ನಗರದಲ್ಲಿ ಮಾದ್ಯಮದವರೊಂದಿಗೆ ಅವರು ಮಾತನಾಡಿದರು, ಡಿಕೆ ಶಿವಕುಮಾರ್​ ಅವರು ಕೊಟ್ಟ ಬಹಿರಂಗ ಆಹ್ವಾನವನ್ನು ಮಾಜಿ ಸಿಎಂ ಕುಮಾರಸ್ವಾಮಿ ಸ್ವೀಕಾರ ಮಾಡಿದ್ದಾರೆ ಎನ್ನುವ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ವಿಚಾರ ಚರ್ಚೆಗೆ ಅಸೆಂಬ್ಲಿಯಲ್ಲಾದರು ಸರಿ ಅಥವಾ ಯಾವ ಚಾನಲ್​ನಲ್ಲಾದರೂ ಸರಿ ಟೈಂ ಫಿಕ್ಸ್​ ಮಾಡಿ ನಾನು ಮಾತನಾಡುತ್ತೇನೆ ಎಂದರು.

ಇದನ್ನೂ ಓದಿ: ಹುಲಿ ಉಗುರು ಪ್ರಕರಣ: ತಲೆತಗ್ಗಿಸುವ ಕೆಲಸ ಮಾಡಿಲ್ಲ, ಮಾಡೋದಿಲ್ಲ- ನಟ ಜಗ್ಗೇಶ್​ ಟ್ವೀಟ್​ 

ನವೆಂಬರ್​ ಒಂದನೇ ತಾರೀಕಿನ ಬಳಿಕ ನಾನು ಚರ್ಚೆಗೆ ಸಿದ್ದ, ನಾನೇನು ಮಾಡಿದ್ದೇನೆ ಅವರೇನು ಮಾಡಿದ್ದಾರೆ ಎನ್ನುವುದನ್ನು ಗಾಳಿಯಲ್ಲಿ ಗುಂಡು ಹೊಡೆದಂತೆ ಮಾತನಾಡುವುದಲ್ಲ ಸಮಯ ನಿಗಧಿ ಮಾಡಿ ನಾನು ಚರ್ಚೆ ಮಾಡುತ್ತೇನೆ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES