Friday, January 10, 2025

ಲಂಚ ಪಡೆಯುತ್ತಿದ್ದಾಗಲೇ ಆಯುಕ್ತೆ ದಾಕ್ಷಾಯಿಣಿ ಚೌಶೆಟ್ಟಿ ಲೋಕಾಯುಕ್ತ ಬಲೆಗೆ!

ಬೆಳಗಾವಿ: ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ಭರ್ಜರಿ ಬೇಟೆಯಾಡಿದ್ದಾರೆ. ಬೆಳಗಾವಿಯಲ್ಲಿ ವಾಣಿಜ್ಯ ತೆರಿಗೆ ಬೆಳಗಾವಿ ವಿಭಾಗದ ಜಂಟಿ ಆಯುಕ್ತೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಆಯುಕ್ತೆ ದಾಕ್ಷಾಯಿಣಿ ಚೌಶೆಟ್ಟಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ಇಪ್ಪತ್ತೈದು ಸಾವಿರ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದ್ದಿದ್ದಾರೆ. ದಾಕ್ಷಾಯಿಣಿ ತಮ್ಮ ಕಚೇರಿಯಲ್ಲೇ  ವಿಕಾಸ್ ಕೋಕಣೆ ಎಂಬುವವರಿಂದ 25ಸಾವಿರ ರೂಪಾಯಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು.

ಇದನ್ನೂ ಓದಿ: ಹುಲಿ ಉಗುರು ಪೆಂಡೆಂಟ್​: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನಿಗೂ ಸಂಕಷ್ಟ!

ಜಿಎಸ್‌ಟಿ ವಿಚಾರವಾಗಿ ವ್ಯಾಜ್ಯ ಬಗೆಹರಿಸಿ ಕೊಡಲು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಲೋಕಾಯುಕ್ತ ಠಾಣೆಯಲ್ಲಿ ವಿಕಾಸ್ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ, ಸದ್ಯ ಅಧಿಕಾರಿಗಳು ದಾಕ್ಷಾಯಿಣಿಯವರ ವಿಚಾರಣೆ ಮುಂದುವರೆಸಿದ್ದಾರೆ.

RELATED ARTICLES

Related Articles

TRENDING ARTICLES