Friday, April 4, 2025

ಹುಲಿ ಉಗುರಿನ ಪ್ರಕರಣ: ನಟ ಜಗ್ಗೇಶ್ ಮನೆಯಲ್ಲೂ ರೇಡ್!

ಬೆಂಗಳೂರು: ಹುಲಿ ಉಗುರಿನ ಲಾಕೆಟ್ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದು, ನಟ ದರ್ಶನ್ ಮನೆಯಲ್ಲಿ ಪರಿಶೀಲನೆ ಬಳಿಕ ಅಧಿಕಾರಿಗಳು ಹಿರಿಯ ನಟ ಜಗ್ಗೇಶ್ ಮನೆಯಲ್ಲೂ ರೇಡ್ ನಡೆಸಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯಸಭಾ ಸದಸ್ಯ ನಟ ಜಗ್ಗೇಶ್ ಮನೆಗೆ ತೆರಳಿದ ಅಧಿಕಾರಿಗಳು ಜಗ್ಗೇಶ್ ಅವರ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಆದರೆ ಜಗ್ಗೇಶ್ ಮನೆಯಲ್ಲಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದರಿಂದ ನೋಟೀಸನ್ನು ಜಗ್ಗೇಶ್​ ಪತ್ನಿಗೆ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ನಟ ದರ್ಶನ್​ ಬಳಿ ಇದ್ದ ಪೆಂಡೆಂಟ್​ ವಶಕ್ಕೆ ಪಡೆದ ಆರ್​ ಎಫ್​ ಓ ತ್ಯಾಗರಾಜ್​!

ಹೀಗಾಗಿ ಸರ್ಚ್​ ವಾರಂಟ್​ ನೊಂದಿಗೆ ಜಗ್ಗೇಶ್​ ಮನೆಗೆ ತೆರಳಿದ್ದ ಅಧಿಕಾರಿಗಳು ಶೋಧ ನಡೆಸಿದ್ದು ಅಲ್ಲಿಂದ ವಾಪಸ್ ತೆರಳಿದ್ದಾರೆ.

RELATED ARTICLES

Related Articles

a

TRENDING ARTICLES