Monday, December 23, 2024

ಹುಲಿ ಉಗುರು ಸಂಕಷ್ಟ: ಸಾಮಾಜಿಕ ಜಾಲತಾಣಗಳಿಂದ ಫೋಟೊಗಳು ಡಿಲೀಟ್ ಮಾಡುತ್ತಿರುವ ಜನರು​!

ಬೆಂಗಳೂರು: ಹುಲಿ ಉಗುರು ಇರುವ ಪೆಂಡೆಂಟ್​ ಧರಿಸಿದ ಪ್ರಕರಣದಲ್ಲಿ ಬಿಗ್​ ಬಾಗ್​ ಕನ್ನಡ ಸೀಸನ್​ 10 ರ ಸ್ಫರ್ಧಿ ವರ್ತೂರು ಸಂತೋಷ್​ ರನ್ನು ಇತ್ತೀಚೆಗೆ ವಶಕ್ಕೆ ಪಡೆದು ನ್ಯಾಯಾಂಗ ಬಂಧನದಲ್ಲಿರಿಸಿದ ಬೆನ್ನಲ್ಲೇ ಸ್ಯಾಂಡಲ್​ವುಡ್​ ನಟರ ಮನೆಗಳ ಮೇಲೂ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಕನ್ನಡದ ಹಿರಿನ ನಟ ಜಗ್ಗೇಶ್​, ನಟ ದರ್ಶನ್​, ರಾಕ್​ಲೈನ್​ ವೆಂಕಟೇಶ್​, ನಟ ನಿಖಿಲ್​ ಕುಮಾರಸ್ವಾಮಿ,  ಅವಧೂತ ವಿನಯ್​ ಗುರೂಜಿ ಮನೆ ಮತ್ತು ಕಚೇರಿಗಳ ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದು ಶೋದಕಾರ್ಯ ಮುಂದುವರೆಸಿದ್ದಾರೆ.

ಇಂದು ಮಧ್ಯಾಹ್ನ ನಟ ದರ್ಶನ್​ ಮನೆಗೆ ಭೇಟಿ ನೀಡಿದ ಅಧಿಕಾರಿಗಳು ದರ್ಶನ್​ ಹೇಳಿಕೆ ಪಡೆದು ಪೆಂಡೆಂಟ್​ ನ್ನು ವಶಕ್ಕೆ ಪಡೆದರೇ, ಹಿರಿಯ ನಟ ಜಗ್ಗೇಶ್​ ನಿವಾಸದಲ್ಲಿ ಜಗ್ಗೇಶ್​ ಇಲ್ಲದ ಕಾರಣ ಅವರ ಪತ್ನಿ ಮತ್ತು ಪುತ್ರನಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ, ಇನ್ನೂ, ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಪುತ್ರ ನಟ ನಿಖಿಲ್​ ಕುಮಾರಸ್ವಾಮಿ ಮನೆಗೆ ಭೇಟಿ ನೀಡಿರುವ ಅರಣ್ಯಾಧಿಕಾರಿಗಳು ನಿಖಿಲ್​ ಅನುಪಸ್ಥಿತಿಯಲ್ಲಿ ಅವರ ತಾಯಿ ಅನಿತಾ ಕುಮಾರಸ್ವಾಮಿಯವರಿಂದ ಹೇಳಿಕೆ ಪಡೆದಿದ್ದಾರೆ.

ಸಾಮಾಜಿಕ ಜಾಲತಾಣಗಳಿಂದ ಹುಲಿ ಉಗುರಿನ ಫೋಟೊಗಳು ಡಿಲೀಟ್​: 

ಹುಲಿ ಉಗುರು ಪೆಂಡೆಂಟ್​ ಧರಿಸಿರುವ ಪ್ರಕರಣ ಎಲ್ಲೇಡೆ ಬಿರುಗಾಳಿ ಬೀಸಿರುವ ಹಿನ್ನೆಲೆ ರಾಜ್ಯದ ಜನತೆಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು ಹುಲಿ ಉಗುರಿನೊಂದಿಗೆ ಫೋಟೊ ತೆಗೆಸಿ ಅದನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಸಾರ್ವಜನಿಕರು ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಿಂದ ಡಿಲೀಟ್​ ಮಾಡಲು ಮುಂದಾಗಿದ್ದಾರೆ ಎನ್ನುವ ಕೂಗು ಕೇಳಿಬಂದಿದೆ.

RELATED ARTICLES

Related Articles

TRENDING ARTICLES