Saturday, November 2, 2024

6 ತಿಂಗಳಿಂದ ರೇಷನ್​ ಪಡೆಯದ ಪಡಿತರ ಚೀಟಿ ರದ್ದು!

ಬೆಂಗಳೂರು : ಸತತ ಆರು ತಿಂಗಳ ಕಾಲ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪದಾರ್ಥಗಳನ್ನು ಪಡೆಯದಿದ್ದರೆ ಪಡಿತರ ಚೀಟಿಯನ್ನೇ ರದ್ದುಗೊಳಿಸಲಾಗುತ್ತಿದ್ದು, ಇದೀಗ ಅಂಥಹವರಿಗೆ ಅಂತಿಮ ಎಚ್ಚರಿಕೆಯನ್ನು ನೀಡುವ ಪ್ರಕ್ರಿಯೆ ನಡೆದಿದೆ.

ಕೇವಲ ಸರಕಾರಿ ಸೌಲಭ್ಯಗಳು, ಆರೋಗ್ಯ ಸಂಬಂಧಿ ಶಸ್ತ್ರ ಚಿಕಿತ್ಸೆ ಉದ್ದೇಶಕ್ಕಾಗಿಯೇ ಸಾವಿರಾರು ಮಂದಿ ಬಿಪಿಎಲ್‌ ಕಾರ್ಡ್‌ ಪಡೆದಿದ್ದಾರೆ. ಅಂಥವರಿಗೆ ಪಡಿತರ ಪದಾರ್ಥ ಬೇಕಿಲ್ಲ. ನ್ಯಾಯಬೆಲೆ ಅಂಗಡಿಗೆ ಹೋಗುವ ವ್ಯವಧಾನವೂ ಅವರಿಗಿಲ್ಲ. ಹೀಗೆ ಸತತ 6 ತಿಂಗಳು ಪಡಿತರ ಪಡೆಯದಿದ್ದರೆ ಅವರ ಹೆಸರಿನಲ್ಲಿರುವ ಪಡಿತರ ಚೀಟಿಯನ್ನೇ ರದ್ದುಗೊಳಿಸಲಾಗುವುದು.

ಇದನ್ನೂ ಓದಿ: ದಸರಾ ಮುಕ್ತಾಯ: K.R. ಮಾರುಕಟ್ಟೆಯಲ್ಲಿ ರಾಶಿ ರಾಶಿ ಕಸ!

ಬಡವರಿಗೆ ಮಾರುಕಟ್ಟೆ ದರದಲ್ಲಿಅಕ್ಕಿಯನ್ನು ಖರೀದಿಸಲು ಸಾಧ್ಯವಾಗುವುದಿಲ್ಲಎಂಬ ಕಾರಣಕ್ಕೆ ರಾಜ್ಯ ಸರಕಾರ ಬಿಪಿಎಲ್‌ ಕಾರ್ಡುದಾರರಿಗೆ ಅಕ್ಕಿ ಹಾಗೂ ಹಣವನ್ನು ನೀಡುತ್ತಿದೆ. ನಿಜಕ್ಕೂ ಈ ಸೌಲಭ್ಯ ನೈಜ ಬಡವರಿಗೆ ಸಿಗುತ್ತಿದೆಯೇ ಎಂಬುದನ್ನು ಪತ್ತೆ ಹಚ್ಚಲು ಸಹ ಈ ಮಾಹಿತಿ ಸಂಗ್ರಹಿಸುವ ಕಾರ್ಯ ಸಹಾಯಕವಾಗಲಿದೆ.

RELATED ARTICLES

Related Articles

TRENDING ARTICLES