Friday, September 20, 2024

ದೇಶದ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಮತ ಚಲಾಯಿಸಿ : ಮೋಹನ್ ಭಾಗವತ್ ಕರೆ

ಬೆಂಗಳೂರು : ದೇಶದ ಏಕತೆ, ಸಮಗ್ರತೆ, ಗುರುತು ಮತ್ತು ಅಭಿವೃದ್ಧಿಯ ಪ್ರಮುಖ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಮತವನ್ನು ಚಲಾಯಿಸಿ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ನಾಗ್ಪುರದಲ್ಲಿ ವಿಜಯದಶಮಿ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಕೃತಿಗೆ ವಿರುದ್ಧವಾದ ಜೀವನಶೈಲಿ, ಸ್ವಾರ್ಥದಿಂದಾಗಿ ಹೊಸ ಶಾರೀರಿಕ ಮತ್ತು ಮಾನಸಿಕ ಜಾಡ್ಯಗಳು ಹುಟ್ಟುತ್ತಿವೆ. ವಿಕೃತಿಗಳು ಮತ್ತು ಅಪರಾಧಗಳು ಹೆಚ್ಚುತ್ತಿವೆ. ಮಿತಿಯಿಲ್ಲದ ವ್ಯಕ್ತಿವಾದದ ಕಾರಣದಿಂದ ಕುಟುಂಬಗಳು ಛಿದ್ರಗೊಳ್ಳುತ್ತಿವೆ ಎಂದು ತಿಳಿಸಿದ್ದಾರೆ.

2024ರ ಆರಂಭದ ದಿನಗಳಲ್ಲಿ ದೇಶವು ಲೋಕಸಭೆಗೆ ಚುನಾವಣೆ ಎದರುರಿಸಲಿದೆ. ಭಾವನೆಗಳನ್ನು ಕೆರಳಿಸಿ ಮತಗಳನ್ನು ಕೊಯ್ಲು ಮಾಡುವ ಪ್ರಯತ್ನಗಳು ಅಪೇಕ್ಷಣೀಯವಲ್ಲ. ಆದರೆ, ಅವು ಇನ್ನೂ ನಡೆಯುತ್ತಲೇ ಇರುತ್ತವೆ. ಸಮಾಜದ ಐಕ್ಯತೆಗೆ ಧಕ್ಕೆಯಾಗುವುದರಿಂದ ಇವುಗಳಿಂದ ದೂರವಿರೋಣ. ಮತದಾನ ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದ್ದಾರೆ.

ಪ್ರಕೃತಿಯ ಮಿತಿಮೀರಿದ ಶೋಷಣೆಯಿಂದ ಮಾಲಿನ್ಯ, ಜಾಗತಿಕ ತಾಪಮಾನದಲ್ಲಿ ಏರಿಕೆ, ಋತುಗಳ ವ್ಯವಸ್ಥೆಯಲ್ಲಿ ಅಸಂತುಲನ ಮತ್ತು ಅದರ ಫಲವಾಗಿ ಹುಟ್ಟುವ ನೈಸರ್ಗಿಕ ದುರಂತಗಳೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತಿವೆ. ಆತಂಕವಾದ, ಶೋಷಣೆ ಮತ್ತು ನಿರಂಕುಶತೆಗಳಿಗೆ ತೆರೆದ ಮೈದಾನ ಸಿಕ್ಕಂತಾಗಿದೆ. ತನ್ನ ಅಸಮರ್ಪಕ ದೃಷ್ಟಿಯಿಂದಾಗಿ ಜಗತ್ತು ಈ ಸಮಸ್ಯೆಗಳನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES