ಬೆಂಗಳೂರು : ಜಗತ್ತಿನಲ್ಲಿ ಒಂದೇ ರೀತಿಯ ಏಳು ಜನ ಇರುತ್ತಾರೆ ಎಂಬ ಮಾತಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇಂತಹದೇ ಒಂದು ವಿಡಿಯೋ ವೈರಲ್ ಆಗಿ ಅಚ್ಚರಿ ಮೂಡಿಸಿದೆ.
ಆ ವಿಡಿಯೋದಲ್ಲಿ ಸೇಮ್ ಟು ಸೇಮ್ ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರಂತೆಯೇ ಕಾಣುವ ಮತ್ತೋರ್ವ ವ್ಯಕ್ತಿ ಟ್ರೆಂಡಿಂಗ್ ಆಗಿದ್ದಾರೆ. ಈ ವಿಡಿಯೋ ನೋಡಿದ ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಂತೂ ಶಾಕ್ ಆಗಿದ್ದಾರೆ. ತೆರೆ ಮೇಲೆ ಕಾಣುವ ತಲೈವಾ ನಿಜ ಜೀವನದಲ್ಲಿ ಹೀಗೆ ಇರ್ತಾರಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಎರಡು ವರ್ಷಗಳ ಬಳಿಕ ರಜನಿಕಾಂತ್ ನಟನೆಯ ಜೈಲರ್ ಸಿನಿಮಾ ತೆರೆ ಮೇಲೆ ಬಂತು ಸೂಪರ್ ಹಿಟ್ ಆಗಿದೆ. ಇದರಿಂದ ಸೂಪರ್ ಸ್ಟಾರ್ ಅಭಿಮಾನಿಗಳು ಇನ್ನೂ ಜೈಲರ್ ಗುಂಗಿನಿಂದ ಹೊರಗೆ ಬಂದಿಲ್ಲ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ವಿಡಿಯೋ ಹಿಂದಿನ ಅಸಲಿ ಸತ್ಯ ಬೆಳಕಿಗೆ ಬಂದಿದೆ.
ವೈರಲ್ ಆದ ವಿಡಿಯೋದಲ್ಲಿ ನಟ ರಜನಿಕಾಂತ್ ಅವರಂತೆ ಹೋಲುವ ವ್ಯಕ್ತಿಯೊಬ್ಬ ಶಾರ್ಟ್ಸ್ ಧರಿಸಿಕೊಂಡಿದ್ದಾನೆ. ಆದರೆ ಅದು ನಟ ರಜನಿಕಾಂತ್ ಅಲ್ಲ ಅನ್ನೋದು ಬಯಲಾಗಿದೆ. ಅದು ಫೇಕ್ ವೀಡಿಯೋ ಆಗಿದ್ದು ರಜಿನಿಕಾಂತ್ ಅವರಂತೆ ಕಾಣೋ ಯಾರೋ ಸಾಮಾನ್ಯ ವ್ಯಕ್ತಿಯಾಗಿದ್ದಾನೆ.
WOW.. #Rajinikanth look alike? pic.twitter.com/g9rCLDaQuV
— VCD (@VCDtweets) October 19, 2023