Wednesday, January 22, 2025

ಜಂಬೂ ಸವಾರಿ ವೀಕ್ಷಿಸಲು 30 ಸಾವಿರ ಆಸನ ವ್ಯವಸ್ಥೆ

ಮೈಸೂರು : ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಮೆರವಣಿಗೆಯು ಇಂದು ನಡೆಯಲಿದ್ದು, ಜಿಲ್ಲಾಡಳಿತದಿಂದ ಅಂತಿಮ ಹಂತದ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಇಂದು 414ನೇ ದಸರಾ ಜಂಬೂ ಸವಾರಿ ಆಚರಣೆ ಮಾಡಲಾಗುತ್ತಿದೆ. ದಸರಾ ಉತ್ಸವದ ಮುಖ್ಯ ಘಟ್ಟವಾದ ಜಂಬೂ ಸವಾರಿಯನ್ನು ಕಣ್ಣುಂಬಿಕೊಳ್ಳಲು 5 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅರಮನೆ ಆವರಣದಲ್ಲೇ 30 ಸಾವಿರಕ್ಕೂ ಹೆಚ್ಚು ಮಂದಿ ಆಸನ ವ್ಯವಸ್ಥೆ ಮಾಡಲಾಗಿದೆ. ಅಂಬಾರಿ ಜೊತೆ 200 ಮಂದಿ ರಾಜ ವೈಭವದ ಧಿರಿಸಿನೊಂದಿಗೆ ಸಾಗಲಿರುವುದು ಈ ಬಾರಿಯ ಹೈಲೆಟ್ ಆಗಿದೆ. ಗೋಲ್ಡ್ ಕಾರ್ಡ್ ಹೊಂದಿದವರಿಗೆ ಅರಮನೆ ಎದುರಿನಲ್ಲೇ ಆಸನದ ವ್ಯವಸ್ಥೆ ಮಾಡಲಾಗಿದೆ.

ಅಂಬಾರಿ ಹೊರಲು ಅಭಿಮನ್ಯು ರೆಡಿ

ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ ಅಭಿಮನ್ಯು ಸಜ್ಜಾಗಿದ್ದಾನೆ. ನಾಲ್ಕನೇ ಬಾರಿಗೆ ಅಂಬಾರಿ ಹೊರುವ ಜವಾಬ್ದಾರಿ ಅಭಿಮನ್ಯುಗೆ ಸಿಕ್ಕಿದೆ. ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ಮೇಲೆ ಎಲ್ಲರ ಚಿತ್ತವಿದೆ. 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊರುವ ‘ಕ್ಯಾಪ್ಟನ್’ ಅಭಿಮನ್ಯು ಆನೆ 5,160 ಕೆ.ಜಿ ತೂಗುವ ಮೂಲಕ ಹೆಚ್ಚು ತೂಕದ ಆನೆಯಾಗಿ ಹೊರಹೊಮ್ಮಿದ್ದಾನೆ. ಮೈಸೂರು ಅರಮನೆಯ ಅಂಬಾ ವಿಲಾಸ ಆವರಣದಲ್ಲಿ ಅಂಬಾರಿ ಇರಿಸಲಾಗಿದೆ.

ಜಂಬೂ ಸವಾರಿಗೆ ಕ್ಷಣಗಣನೆ‌

ವಿಶ್ವ ವಿಖ್ಯಾತ ಜಂಬೂಸವಾರಿಗೆ ಎಲ್ಲಾರು ಕಾತುರದಿಂದ ಕಾಯುತ್ತಿದ್ದಾರೆ. ಅರಮನೆ ಮುಂಭಾಗದಲ್ಲಿ ಜಂಬೂ ಸವಾರಿಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಅರಮನೆ ಮುಂಭಾಗದಲ್ಲಿ ಆಸನದ ಸಿದ್ದತೆ ಮಾಡಲಾಗಿದೆ. ಪಾಸ್ ಇದ್ದವರಿಗೆ ಮಾತ್ರ ಜಂಬೂ‌ಸವಾರಿ ವೀಕ್ಷಿಸಲು ಅವಕಾಶವಿದೆ. ಜಂಬೂ ಸವಾರಿ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವವು ಇಂದು ವಿಜೃಂಭಣೆಯ ದಸರಾ ಮೆರವಣಿಗೆಯೊಂದಿಗೆ ಸಂಪನ್ನಗೊಳ್ಳಲಿದೆ.

RELATED ARTICLES

Related Articles

TRENDING ARTICLES