Wednesday, January 22, 2025

ನಾವು ಕಾಂಗ್ರೆಸ್​ಗೆ ಮತ ಹಾಕಿಲ್ಲ, ಆದ್ರೂ ಹೇಗೆ ಅಧಿಕಾರಕ್ಕೆ ಬಂತು? : ಬಿಜೆಪಿ ಲೇವಡಿ

ಬೆಂಗಳೂರು : ನಾವು ಕಾಂಗ್ರೆಸ್‌ ಪಕ್ಷಕ್ಕೆ ಮತವೇ ಹಾಕಿಲ್ಲ, ಆದರೂ ಹೇಗೆ ಕಾಂಗ್ರೆಸ್​ ಅಧಿಕಾರಕ್ಕೆ ಬಂತು? ಎಂದು ರಾಜ್ಯದ ಜನ ಪ್ರಶ್ನೆ ಮಾಡುತ್ತಿದ್ದಾರೆ. ಅವರ ಪ್ರಶ್ನೆಗೆ ಸಿಎಂ ಸಿದ್ದರಾಮ್ಯಯ್ಯ ಅವರ ಆಪ್ತ ಭೈರತಿ ಸುರೇಶ್‌ ಅವರ ನಕಲಿ ಮತದಾರರ ಪಟ್ಟಿಯೇ ಉತ್ತರ ಎಂದು ಕಾಂಗ್ರೆಸ್​ ಸರ್ಕಾರವನ್ನು ವಿರುದ್ಧ ರಾಜ್ಯ ಬಿಜೆಪಿ ಲೇವಡಿ ಮಾಡಿದೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯದಲ್ಲಿ ಎಟಿಎಂ ಸರ್ಕಾರ (ATM Sarkara) ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಈ ಅಂಶಗಳೇ ಸಾಧನಗಳು ಎಂದು ಕುಟುಕಿದೆ.

ನಕಲಿ ಮತದಾರರ ಪಟ್ಟಿ (ಭೈರತಿ ಸುರೇಶ್ ಆಪ್ತ ಸೆರೆ), ಸುಳ್ಳು ಗ್ಯಾರಂಟಿಗಳ ಪುಕಾರು (ಜನತೆ ಕೈ ಸೇರಿಲ್ಲ ಹಣ), ಕುಕ್ಕರ್‌ ಇಸ್ತ್ರಿ ಪೆಟ್ಟಿಗೆ, ಹಣ ಹಂಚಿಕೆ (ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ), ಕಿವಿ ಮೇಲೆ ಕಲರ್‌ ಕಲರ್‌ ಹೂ (ವಿದ್ಯುತ್‌, ಕಾವೇರಿ, ರೈತರು), ನಿರಂತರ ಸುಳ್ಳು ಸುದ್ದಿಗಳ ಹರಡುವಿಕೆ (ಜಾತಿ, ಭ್ರಷ್ಟಾಚಾರ, ತುಷ್ಟೀಕರಣ) ಎಂದು ಪಟ್ಟಿ ಮಾಡಿದೆ.

RELATED ARTICLES

Related Articles

TRENDING ARTICLES