Wednesday, January 22, 2025

ಬೊಮ್ಮಾಯಿ, ಶ್ರೀರಾಮುಲುಗೆ ಟಿಕೆಟ್ ಕೊಡಿಸಿದ್ದೇ ನಾನು : ಶಿವಮೂರ್ತಿ ಸ್ಫೋಟಕ ಹೇಳಿಕೆ

ಬಳ್ಳಾರಿ : ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಚಿವ ಶ್ರೀರಾಮುಲುಗೆ ನಾನೇ ಟಿಕೆಟ್ ಕೊಡಿಸಿದ್ದೆ. ನಾವು ಇಲ್ಲಾ ಅಂದ್ರೆ ಶ್ರೀರಾಮುಲು ಎಲ್ಲಿ ಬೆಳೆಯುತ್ತಿದ್ದ. ನಂಬಿಸಿ ನನಗೆ ರೇವಣಸಿದ್ದಪ್ಪ ವಂಚಸಿದ್ರು. ಹೀಗಾಗಿ, ನಾನು ನಂಬಿ ಬಿಜೆಪಿ ಟಿಕೆಟ್ ಕೊಡಿಸ್ತಾರೆ ಅಂತ ಹಣ ಕೊಟ್ಟೆ ಎಂದು ವಂಚನೆಗೊಳಗಾದ ನಿವೃತ್ತ ಎಂಜಿನಿಯರ್ ಶಿವಮೂರ್ತಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಹಗರಿಬೊಮ್ಮನಹಳ್ಳಿ ಬಿಜೆಪಿ ಟಿಕೆಟ್ ಕೊಡಿಸ್ತಿನಿ ಅಂತ ಮೋಸ ಮಾಡಿದ್ರು. ನಾನು ಹಣ ಕೊಟ್ಟೆ, ನನಗೆ ಟಿಕೆಟ್ ಮಿಸ್ ಆದಾಗ, ನಾನು ಹಣ ವಾಪಸು ಕೇಳಿದೆ. ಇಂದು, ನಾಳೆ ಅಂತ ಹಾಗೆ ದಿನಗಳನ್ನ ದೂಡಿದ್ರು. ಆದ್ರೆ ಎರಡು ತಿಂಗಳುಗಳ ಕಾಲ ನನ್ ಫೋನ್ ತಗೋಳಲಿಲ್ಲ  ಎಂದು ತಿಳಿಸಿದ್ದಾರೆ.

ಹಣ ವಾಪಸ್ ಕೊಡಿ ಅಂತ ಕೇಳಿ, ಕೇಳಿ ನನಗೆ ಸಾಕಾಗಿ ಹೋಯ್ತು. ನಮ್ಮ ತಮ್ಮನ ಸ್ನೇಹಿತರು, ಕೆಲ ಸಂಘಟನೆಯವರು, ಅವರ ಬಳಿ ಮಾತನಾಡಿದಾಗ ಚೆಕ್ ಕೊಟ್ರು. ಅವರು ಕೊಟ್ಟಿರುವ ಎರಡು ಚೆಕ್ ಗಳು ಈಗ ಬೌನ್ಸ್ ಆಗಿವೆ. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ನಾನು ವಂಚನೆ ಕೇಸ್ ಕೊಟ್ಟಿದ್ದೇನೆ. ರೇವಣಸಿದ್ದಪ್ಪನ ಕಾರು ಮೇಲೆ ಯಾರೋ ಅಟ್ಯಾಕ್ ಮಾಡಿದ್ದಾರೆ. ಅದನ್ನ ನನ್ನ ಮೇಲೆ ಹಾಕೋ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ನಾನು ಜೀವ ಭಯವಿದೆ ಅಂತ ನಾನು ದೂರು ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.

ನನಗೂ ಬೆದರಿಕೆ ಹಾಕಿದ್ದಾರೆ

ನನಗೂ ಬೆದರಿಕೆ ಹಾಕಿದ್ದಾರೆ, ಅವರಿವರಿವರ ಬಳಿ ಕರೆ ಮಾಡಿಸ್ತಾರೆ. ನನಗೆ ನನ್ನ ಹಣ ಕೊಡಿ ಅಂತ ಹೇಳಿದೆ ಅಷ್ಟೇ. ನಾನು ಹಲವಾರು ವರ್ಷಗಳ ಎಂಜಿನಿಯರ್ ಆಗಿ ಕೆಲಸ ಮಾಡಿದ್ದೇನೆ. ನಿವೃತ್ತಿ ಹೊಂದಿ ಕೊಟ್ಟೂರು ಪಟ್ಟಣದಲ್ಲಿ ಸೆಟಲ್ ಆಗಿದ್ದೇನೆ. ನಾನು ಕೊಟ್ಟ ಹಣ ವಾಪಸ್ ಕೊಡಿ ಅಂತ ಕೇಳಿದ್ದೇನೆ, ಕೊಡುತ್ತಿಲ್ಲ ಎಂದು ವಂಚನೆಗೊಳಗಾದ ಶಿವಮೂರ್ತಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES