ಬೆಂಗಳೂರು : ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, 14 ವರ್ಷಗಳ ಸೆರೆವಾಸ ವಿಧಿಸಲಾಗಿದೆ.
ದೇಶದ ರಹಸ್ಯಗಳನ್ನು ಬಹಿರಂಗ ಪಡಿಸಿದ ಆರೋಪದ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್‌ಗೆ 14 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.
ಇಸ್ಲಾಮಾಬಾದ್‌ನ ಅದಿಲಾಬಾದ್ ಜೈಲಿನಲ್ಲಿರುವ ಇಮ್ರಾನ್ ಖಾನ್‌ರನ್ನು ಕೋರ್ಟ್ ವಿಚಾರಣೆಗೆ ಒಳಪಡಿಸಲಾಗಿತ್ತು. ಆತನ ಮೇಲೆ ಮಾಡಲಾಗಿರುವ ದೇಶದ್ರೋಹದ ಆರೋಪಗಳನ್ನು ಆತನ ಸಮ್ಮುಖದಲ್ಲೇ ಬಹಿರಂಗವಾಗಿ ಓದಿ ಹೇಳಲಾಯ್ತು. ಬಳಿಕ ನ್ಯಾಯಾಧೀಶಕರು ಇಮ್ರಾನ್ ಖಾನ್‌ಗೆ 14 ವರ್ಷಗಳ ಸೆರೆವಾಸ ವಿಧಿಸಿ ತೀರ್ಪು ನೀಡಿದರು ಎಂದು ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿಯ ವಕ್ತಾರ ಶಾಹ್ ಕವರ್ ತಿಳಿಸಿದ್ದಾರೆ.