ಬೆಂಗಳೂರು : ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡಾಗಿನಿಂದ ಬಿಲಿಯನೇರ್ ಎಲಾನ್ ಮಸ್ಕ್ ಒಂದಿಲ್ಲೊಂದು ರೀತಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅದರ ಹೆಸರನ್ನು ಎಕ್ಸ್‌ಗೆ ಬದಲಾಯಿಸಲಾಗಿದೆ.
ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾ ಸ್ಥಾಪಕರೂ ಆಗಿರುವ ಮಸ್ಕ್ ಅವರು, ಈ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಎಲಾನ್ ಮಸ್ಕ್ ಮಾಡುವ ಅನೇಕ ಪೋಸ್ಟ್‌ಗಳು ಪ್ರಪಂಚದಾದ್ಯಂತದ ಬಳಕೆದಾರರನ್ನು ಕುತೂಹಲ ಕೆರಳಿಸುತ್ತದೆ.
ಇದೇ ರೀತಿ ಇತ್ತೀಚೆಗೆ ಎಲಾನ್ ಮಸ್ಕ್, ವಿಕಿಪೀಡಿಯಾ ತಮ್ಮ ಹೆಸರನ್ನು ಬದಲಾಯಿಸಿದರೆ 1 ಬಿಲಿಯನ್ ಡಾಲರ್ ಪಾವತಿಸುವುದಾಗಿ ಹೇಳಿದ್ದಾರೆ. ಅವರು ತಮ್ಮ ಹೆಸರನ್ನು Dickipedia ಎಂದು ಬದಲಾಯಿಸಿದರೆ ನಾನು ಅವರಿಗೆ ಒಂದು ಬಿಲಿಯನ್ ಡಾಲರ್ ನೀಡುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.
ಇಷ್ಟೇ ಅಲ್ಲದೆ, ವಿಕಿಪೀಡಿಯಾದ ಮುಖಪುಟದ ಸ್ಕ್ರೀನ್‌ಶಾಟ್ ಅನ್ನು ಮತ್ತೊಂದು ಪೋಸ್ಟ್‌ನಲ್ಲಿ ಹಂಚಿಕೊಂಡ ಎಲಾನ್ ಮಸ್ಕ್, ಅದರಲ್ಲಿ ‘ವಿಕಿಪೀಡಿಯಾ ಮಾರಾಟಕ್ಕಿಲ್ಲ’ ಮತ್ತು ‘ಜಿಮ್ಮಿ ವೇಲ್ಸ್‌ನಿಂದ ವೈಯಕ್ತಿಕ ಮನವಿ’ ಎಂದು ಉಲ್ಲೇಖಿಸಲಾಗಿದೆ. ‘ವಿಕಿಮೀಡಿಯಾ ಫೌಂಡೇಶನ್ ಏಕೆ ಹೆಚ್ಚು ಹಣವನ್ನು ಬಯಸುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ವಿಕಿಪೀಡಿಯವನ್ನು ನಿರ್ವಹಿಸಲು ಇದು ಖಂಡಿತವಾಗಿಯೂ ಅಗತ್ಯವಿಲ್ಲ’ ಎಂದಿದ್ದಾರೆ.
I will give them a billion dollars if they change their name to Dickipedia https://t.co/wxoHQdRICy
— Elon Musk (@elonmusk) October 22, 2023