Monday, December 23, 2024

ಯಜಮಾನಿ ಮುಂದೆ ಯಜಮಾನ ತಲೆ ತಗ್ಗಿಸಬೇಕಾ? : ವಾಟಾಳ್ ನಾಗರಾಜ್

ಬೆಂಗಳೂರು : ಮನೆಯ ಯಜಮಾನಿಗೆ ಗೃಹಲಕ್ಷ್ಮಿ ಎಂದು ಹೇಳಿ‌ 2,000 ರೂಪಾಯಿ ಹಣ ನೀಡುತ್ತಿದ್ದಾರೆ. ಯಜಮಾನಿಗೆ ಹಣ ಕೊಟ್ಟಿದ್ದು ಬಹಳ ಸಂತೋಷ. ಆದರೆ, ಯಜಮಾನನ ಪರಿಸ್ಥಿತಿ ಏನು? ಯಜಮಾನಿ ಮುಂದೆ ಯಜಮಾನ ತಲೆ ತಗ್ಗಿಸಬೇಕಾ? ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಂಡಸರಿಗೆ ಅಪಮಾನ ಮಾಡುತ್ತಿದ್ದೀರಿ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡುತ್ತಿದ್ದೇನೆ. ಗಂಡಸರಿಗೂ ಹೆಂಗಸರಿಗೆ ನೀಡುವಷ್ಟೇ ಹಣ ನೀಡಬೇಕು ಎಂದು ಆಗ್ರಹಿಸಿದರು.

ದಸರಾ ಸಂದರ್ಭದಲ್ಲಿ ಯಜಮಾನರಿಗೂ ಗೃಹಲಕ್ಷ್ಮಿನ ವಿಸ್ತರಣೆ ಮಾಡಬೇಕು. ಮಹಿಳೆಯರಿಗೆ ಉಚಿತ ಪ್ರಯಾಣ, ಆದರೆ ಪುರುಷರು ಎಲ್ಲಿಗೆ ಹೋಗಬೇಕು? ಪುರುಷರನ್ನು ಕಡೆಗಣಿಸಬಾರದು. ಪುರುಷರಿಗೆ ರಾಜ್ಯ ಸರ್ಕಾರ ಸಹಾಯ ಮಾಡಬೇಕು. ನಿಮ್ಮ ಗ್ಯಾರಂಟಿ ಪುರುಷರಿಗೂ ತಲುಪಬೇಕು. ಹೀಗಾಗಿ ಇಂದು ನಾನು ಬಸ್‌ನಲ್ಲಿ ಪ್ರಯಾಣ ಮಾಡಿ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದು ಹೇಳಿದರು.

ಸಿದ್ದರಾಮಯ್ಯ ಒಳ್ಳೆ ಕೆಲಸ ಮಾಡಿದ್ದಾರೆ

ಮೈಸೂರಿನ ದಸರಾ ಬಹಳ ಸುಂದರವಾದ ಉತ್ಸವ. ಈ ಸಂದರ್ಭವನ್ನು ನಾನು ವಿನೂತ ಚಳುವಳಿಗೆ ಉಪಯೋಗಿಸಿಕೋಳ್ಳುತ್ತಿದ್ದೇನೆ. ಮೈಸೂರು ದಸರಾಕ್ಕೆ‌ ಎಲ್ಲೆಡೆ‌ಯಿಂದ ಜನ ಬರ್ತಾರೆ. ಮುಖ್ಯವಾಗಿ ನಾಡಿನ ಮೂಲೆ ಮೂಲೆಯಿಂದ ಜನರು ಬರುತ್ತಾರೆ. ಕರ್ನಾಟಕ ಸರ್ಕಾರ, ಸಿದ್ದರಾಮಯ್ಯ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು.

RELATED ARTICLES

Related Articles

TRENDING ARTICLES