Wednesday, January 22, 2025

ನ್ಯೂಜಿಲೆಂಡ್ ಆಲೌಟ್.. ಭಾರತಕ್ಕೆ 274 ರನ್​ಗಳ ಸವಾಲಿನ ಟಾರ್ಗೆಟ್

ಬೆಂಗಳೂರು : ಭಾರತ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 274 ರನ್​ಗಳ ಸವಾಲಿನ ಟಾರ್ಗೆಟ್ ಕಲೆಹಾಕಿದೆ.

ಧರ್ಮಶಾಲಾದ HPCA ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ನಿಗದಿತ 50 ಓವರ್​ಗಳಲ್ಲಿ 10 ವಿಕೆಟ್ ಕಳೆದುಕೊಂಡು 273 ರನ್​ ಕಲೆಹಾಕಿತು.

ನ್ಯೂಜಿಲೆಂಡ್ ಪರ ಸಮಯೋಚಿತ ಬ್ಯಾಟಿಂಗ್ ಪ್ರದರ್ಶಿಸಿದ ಮಿಚೆಲ್ 127 ಎಸೆತಗಳಲ್ಲಿ 130 ರನ್ ಚಚ್ಚಿದರು. ಇದರಲ್ಲಿ 9 ಬೌಂಡರಿ ಹಾಗೂ 5 ಬೊಂಬಾಟ್ ಸಿಕ್ಸರ್ ಸೇರಿದ್ದವು. ರಚಿನ್ ರವೀಂದ್ರ 75, ಫಿಲಿಪ್ಸ್ 23 ರನ್ ಗಳಿಸಿದರು.

5 ವಿಕೆಟ್ ಕಬಳಿಸಿದ ಶಮಿ

ಭಾರತದ ಪರ ಮೊಹಮ್ಮದ್ ಶಮಿ 5 ವಿಕೆಟ್ ಕಬಳಿಸಿ ಮೀಂಚಿದರು. ಈ ಮೂಲಕ ವಿಶ್ವಕಪ್​ನಲ್ಲಿ ತಾನಾಡಿದ ಮೊದಲ ಪಂದ್ಯದಲ್ಲೇ ತಂಡಕ್ಕೆ ಬೊಂಬಾಟ್ ಕಂಬ್ಯಾಕ್ ಮಾಡಿದರು. ಕುಲ್​ದೀಪ್ ಯಾದವ್ 2, ಬೂಮ್ರಾ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES