Wednesday, January 22, 2025

ದುಡ್ಡಿನ ವಿಚಾರಕ್ಕೆ ಹೆಂಡತಿಯನ್ನೇ ಕೊಂದ ಪತಿ, ಹೆಣ್ಣು ಮಗು ಅನಾಥ

ಚಾಮರಾಜನಗರ : ಹಣಕಾಸಿನ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಜಗಳವಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಮಂಗಲ ಹೊಸೂರು ಗ್ರಾಮದಲ್ಲಿ ನಡೆದಿದೆ.

ಬಲವಾದ ಆಯುಧದಿಂದ ತಲೆಗೆ ಹೊಡೆದು ಹೆಂಡತಿಯನ್ನು ಪತಿ ಕೊಂದಿದ್ದಾನೆ. ತಮಿಳುನಾಡು ಮೂಲದ ರಾಧಿಕಾ ಮೃತ ದುರ್ದೈವಿ. ಪತಿ ಕಾರ್ತಿಕ್ ಎಂಬಾತ ಕೃತ್ಯವೆಸಗಿದ್ದಾನೆ. ದಂಪತಿಗೆ 10 ತಿಂಗಳ ಹೆಣ್ಣು ಮಗುವಿದೆ.

ಮಂಗಲ ಹೊಸೂರು ಗ್ರಾಮದಲ್ಲಿ ಜಮೀನನ್ನು ಗುತ್ತಿಗೆ ಪಡೆದು ಕುಟುಂಬ ವ್ಯವಸಾಯ ಮಾಡುತ್ತಿತ್ತು. ಹಣಕಾಸಿನ ವಿಚಾರವಾಗಿ ರಾತ್ರಿ ಜಗಳ ಆಗಿತ್ತು. ಕೋಪದಲ್ಲಿ ಗಂಡ ಯಾವುದೋ ಆಯುಧದಿಂದ ಹೆಂಡತಿಯ ತಲೆಗೆ ಹೊಡೆದಿದ್ದಾನೆ. ಸಂತೇಮರಹಳ್ಳಿ ಪೊಲೀಸರು ಆರೋಪಿ ಕಾರ್ತಿಕ್​​​ನನ್ನು ವಶಕ್ಕೆ ಪಡೆದಿದ್ದಾರೆ. DYSP ಲಕ್ಷ್ಮಯ್ಯ, ಸರ್ಕಲ್ ಇನ್ಸ್ಪೆಕ್ಟರ್ ಬಸವರಾಜ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES