Monday, December 23, 2024

ಪ್ರಿಯಕರನೊಂದಿಗೆ ಮಗಳು ಪರಾರಿ: ಅಪ್ಪ ನೇಣಿಗೆ ಶರಣು!

ಆನೇಕಲ್​: ಮಗಳು ಪ್ರೀತಿಸಿದವನೊಂದಿಗೆ ಪರಾರಿಯಾಗಿರುವ ಘಟನೆ ತಿಳಿದು ಮನನೊಂದ ತಂದೆ ನೇಣಿಗೆ ಶರಣಾಗಿರುವ ಘಟನೆ ಆನೇಕಲ್​ನ ನಾರಾಯಣಪುರದಲ್ಲಿ ನಡೆದಿದೆ.

ಗೋಪಾಲ್​ ನೇಣಿಗೆ ಶರಣಾದ ದುರ್ದೈವಿ, ಮಗ್ಗದ ಕೆಲದ ಮಾಡಿಕೊಂಡಿದ್ದ ಗೋಪಾಲ್​, ಕಳೆದ ಎರಡು ದಿನಗಳ ಹಿಂದೆ ತನ್ನ ಮಗಳು ಪ್ರೀತಿಸಿದವನೊಂದಿಗೆ ಪರಾರಿಯಾಗಿರುವ ವಿಚಾರದಿಂದ ಮನೆಯಲ್ಲಿ ಗಲಾಟೆಗಳು ನಡೆದಿತ್ತು. ಇದೇ ವಿಚಾರಕ್ಕೆ ಮನನೊಂದು ಇಂದು ಬೆಳಗ್ಗೆ ಮನೆಬಿಟ್ಟು ಹೊರಗೆ ಹೋಗಿದ್ದ ಗೋಪಾಲ್​, ಆನೇಕಲ್​ ನ ಕೆರೆಭಾಗದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ಯುವಕ ಯುವತಿಯರ ಮಧ್ಯೆ ಗಲಾಟೆ!

ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತ ದೇಹವನ್ನು ಆನೇಕಲ್ ಶವಗಾರಿಕೆ ಸ್ಥಳಾಂತರಿಸಿದ್ದಾರೆ.

RELATED ARTICLES

Related Articles

TRENDING ARTICLES