ಬೆಂಗಳೂರು : ಧರ್ಮಶಾಲಾದ HPCA ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಭಾರತ 4 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ 20 ವರ್ಷಗಳ ನಂತರ ವಿಶ್ವಕಪ್‌ನಲ್ಲಿ ಕಿವೀಸ್ ಅನ್ನ ಭಾರತ ಮಣಿಸಿತು.
ನ್ಯೂಜಿಲೆಂಡ್ ನೀಡಿದ್ದ 274 ರನ್ಗಳ ಸವಾಲಿನ ಗುರಿ ಬೆನ್ನಟ್ಟಿದ ಭಾರತ 48 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಈ ಮೂಲಕ ವಿಶ್ವಕಪ್ 2023 ಟೂರ್ನಿಯಲ್ಲಿ ಸತತ ಐದನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿತು.
ಭಾರತದ ಪರ ರನ್ ಮೆಷಿನ್ ವಿರಾಟ್ ಕೊಹ್ಲಿ ಬೊಂಬಾಟ್ ಅರ್ಧಶತಕ (95) ಸಿಡಿಸಿ ಮಿಂಚಿದರು. ಕೇವಲ 5 ರನ್ಗಳಿಂದ ಶತಕ ವಂಚಿತರಾದರು. ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ 46, ಶುಭ್ಮನ್ ಗಿಲ್ 26, ಶ್ರೇಯಸ್ ಅಯ್ಯರ್ 33, ಕೆ.ಎಲ್ ರಾಹುಲ್ 27 ಹಾಗೂ ರವೀಂದ್ರ ಜಡೇಜಾ ಅಜೇಯ 39 ರನ್ ಸಿಡಿಸಿದರು. ನ್ಯೂಜಿಲೆಂಡ್ ಪರ ಲೂಕಿ ಫರ್ಗ್ಯೂಸನ್ 2, ಬೋಲ್ಟ್ ಹಾಗೂ ಮಿಚೆಲ್ ಸ್ಯಾಂಟ್ನರ್ ತಲಾ ಒಂದು ವಿಕೆಟ್ ಪಡೆದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ನಿಗದಿತ 50 ಓವರ್ಗಳಲ್ಲಿ 10 ವಿಕೆಟ್ ನಷ್ಟಕ್ಕೆ 273 ರನ್ ಕಲೆಹಾಕಿತು. ಮಿಚೆಲ್ 127 ಎಸೆತಗಳಲ್ಲಿ 130 ರನ್ ಚಚ್ಚಿದರು. ಇದರಲ್ಲಿ 9 ಬೌಂಡರಿ ಹಾಗೂ 5 ಬೊಂಬಾಟ್ ಸಿಕ್ಸರ್ ಸೇರಿದ್ದವು. ರಚಿನ್ ರವೀಂದ್ರ 75, ಫಿಲಿಪ್ಸ್ 23 ರನ್ ಗಳಿಸಿದರು. ಭಾರತದ ಪರ ಮೊಹಮ್ಮದ್ ಶಮಿ 5 ವಿಕೆಟ್, ಕುಲ್ದೀಪ್ ಯಾದವ್ 2, ಬೂಮ್ರಾ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಪಡೆದರು.
First game of the tournament for him and Mohd. Shami receives the Player of the Match award for his outstanding five-wicket haul in Dharamsala 🏆👏
Scorecard ▶️ https://t.co/Ua4oDBM9rn#TeamIndia | #CWC23 | #MenInBlue | #INDvNZ pic.twitter.com/21kegb4VB0
— BCCI (@BCCI) October 22, 2023