Sunday, November 24, 2024

ಹಿಜಬ್​ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಿದ ಸರ್ಕಾರ!

ಬೆಂಗಳೂರು : ಹಿಜಬ್​ ಧರಿಸಿ ಪರೀಕ್ಷೆ ಹಾಜರಾಗಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅನುಮತಿಯನ್ನು ನೀಡಲಾಗಿದೆ.

ನಿಗಮ ಮಂಡಳಿಗಳ ಹುದ್ದೆಗಳ ಭರ್ತಿಗಾಗಿ ಅಕ್ಟೋಬರ್​ 28,29 ರಂದು ನಡೆಯಲಿರುವ ಪರೀಕ್ಷೆಗಳಲ್ಲಿ ಹಿಜಬ್​ ಧರಿಸಿ ಹಾಜರಾಗಲು ಅನುಮತಿ ನೀಡಿದೆ, ಇನ್ನು, ಹಿಜಬ್​ ಧರಿಸಿ ಪರೀಕ್ಷೆ ಬರೆಯಲು ಬರುವ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಒಂದು ಗಂಟೆಗೆ ಮೊದಲೇ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಪೊಲೀಸರಿಗೆ ಸೌಲಭ್ಯ ಒದಗಿಸುವುದು ಸರ್ಕಾರದ ಕರ್ತವ್ಯ : ಸಿಎಂ ಸಿದ್ದರಾಮಯ್ಯ

ಬಿಜೆಪಿ ಅವಧಿಯಲ್ಲಿ ಭಾರಿ ಸದ್ದು ಮಾಡಿದ್ದ ಹಿಜಬ್​ ವಿವಾದ ಬಳಿಕ  ಬ್ಯಾನ್​ ಆಗಿತ್ತು ಇದೀಗ ಮತ್ತೆ ಹಿಜಬ್​ ಧರಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅನುಮತಿ ನೀಡಿದೆ.

ಇದರೊಂದಿಗೆ ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲೂ ಹಿಜಬ್​ ಗೆ ಅನುಮತಿ ಸಿಗಲಿದ್ಯಾ, ಹಿಜಬ್​ ವಿಚಾರವಾಗಿ ಮತ್ತೆ ರಾಜ್ಯದಲ್ಲಿ ವಿವಾದ ಭುಗಿಲೇಳಲಿದ್ಯಾ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರ ಹೋರಾಟ ಮುಂದುವರೆಸಲಿದೆಯಾ ಎನ್ನುವುದನ್ನು ಕಾದುನೋಡಬೇಕಾಗಿದೆ.

RELATED ARTICLES

Related Articles

TRENDING ARTICLES