Sunday, December 22, 2024

ವಿಜಯೇಂದ್ರಗೆ ಅವರ ಮನೆ ಸರಿಯಾಗಿ ನೋಡಿಕೊಳ್ಳೋಕೆ ಹೇಳಿ : ಮಧು ಬಂಗಾರಪ್ಪ

ಕೊಪ್ಪಳ : ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗತ್ತದೆ ಎಂಬ ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ ಹೇಳಿಕೆ ವಿಚಾರಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ತೀಕ್ಷ್ಣ ಪ್ರತಿಕ್ರಿಯಿಸಿದ್ದಾರೆ. ವಿಜಯೇಂದ್ರ ಏನೂ ಕಾಂಗ್ರೆಸ್​​ನಲ್ಲಿರೋರಾ? ಅವರ ಮನೆಯನ್ನ ಸರಿಯಾಗಿ ನೋಡಿಕೊಳ್ಳೋಕೆ ಹೇಳಿ ಎಂದು ಕುಟುಕಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,. ಅವರ ತಂದೆಯವರ ಅಧ್ಯಕ್ಷತೆಯಲ್ಲಿ ಯಾಕೆ ಬಿಜೆಪಿ 66 ಬಂದು ಕೂತಿದೆ ಎಂದು ಹೇಳಲಿ. ನಮ್ಮನೆ ಬಗ್ಗೆ ನಾವು ವಿಚಾರ ಮಾಡ್ತಿವಿ. ಬಿಜೆಪಿಯವರು ಹೀಗೆ ಮಾತನಾಡ್ತಾ ಕೂತರೆ ಮುಂದೆ 37ಕ್ಕೆ ಬಂದು ಕೂರಿಸ್ತಾರೆ. ಬಿಜೆಪಿಯವರಿಗೆ ಬಸ್ ಸ್ಟ್ಯಾಂಡ್ ನಲ್ಲಿ ಹೋಗಿ ಜೋತಿಷ್ಯ ಹೇಳೋಕೆ ಹೇಳಿ ಎಂದು ತಿರುಗೇಟು ಕೊಟ್ಟಿದ್ದಾರೆ.

ಸಿದ್ದರಾಮಯ್ಯರ ಕನಸು ನನಸಾಗತ್ತೆ

ಸಚಿವ ಸತೀಶ್ ಜಾರಕಿಹೊಳಿ ಮುನಿಸು ವಿಚಾರದ ಬಗ್ಗೆ ಮಾತನಾಡಿ, 5 ವರ್ಷ ತಲೆನೇ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ನನ್ನ ಕನಸು, ಕಲ್ಯಾಣ ಕರ್ನಾಟಕ ಭಾಗ ಹಾಗೂ ಸಿದ್ದರಾಮಯ್ಯ ಅವರ ಕನಸು ನನಸಾಗತ್ತೆ. ಸರ್ಕಾರದಲ್ಲಿ 50:50 ಫಾರ್ಮುಲಾ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡತ್ತದೆ. ನಾನು ಮಿನಿಸ್ಟರ್ ಆಗಿರೋದು ಹೈಕಮಾಂಡ್ ನಿರ್ದೇಶನದ ಮೇಲೆ ಎಂದು ಜಾಣ್ಮೆಯ ಉತ್ತರ ನೀಡಿದ್ದಾರೆ.

ನಕಲಿ ವೋಟರ್ ಐಡಿ ಪ್ರಕರಣ ವಿಚಾರ ಕುರಿತು ಮಾತನಾಡಿ, ಇಂತಹ ವಿಚಾರಗಳಿಗೆ ಒಂದೇ ಹೇಳೋದು, ನಮ್ಮ ದೇಶದಲ್ಲಿ ಕಾನುನೂ ಇದೆ. ಅದಕ್ಕೆ ಸಂಪೂರ್ಣ ಸಲಹೆ ಸಹಕಾರ ನೀಡಬೇಕು, ನಾವು ಸರ್ಕಾರದಲ್ಲಿ ಕೂತು ಮಾಡ್ತಿವಿ. ಯಾವಾಗಲೂ ಕಾನುನೂ ಗೆಲ್ಲಬೇಕು ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES